BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು预览

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

20天中的第16天

"ಮುಂಬರುವ ಪಸ್ಕ ಹಬ್ಬಕ್ಕಾಗಿ ಯೇಸು ಯೆರೂಸಲೇಮಿನಲ್ಲಿ ಕಾಯುತ್ತಿರುವಾಗ, ದೇವರ ರಾಜ್ಯದ ಸ್ವರೂಪದ ಕುರಿತೂ ಮುಂಬರುವ ವಿಷಯಗಳ ಕುರಿತೂ ದೇವಾಲಯದಲ್ಲಿ ದಿನಾಲೂ ಆತನು ಬೋಧಿಸುತ್ತಿದ್ದನು. ಒಂದಾನೊಂದು ಸಂದರ್ಭದಲ್ಲಿ, ಯೇಸು ಕಣ್ಣೆತ್ತಿ ನೋಡಿದಾಗ ಅನೇಕ ಮಂದಿ ಶ್ರೀಮಂತರು ದೇವಾಲಯದ ಖಜಾನೆಗೆ ದೊಡ್ಡ ದೊಡ್ಡ ಕಾಣಿಕೆಗಳನ್ನು ಕೊಡುವುದನ್ನೂ ಒಬ್ಬ ಬಡ ವಿಧವೆಯು ಒಂದೆರಡು ನಾಣ್ಯಗಳನ್ನು ಮಾತ್ರ ಕೊಡುವುದನ್ನೂ ಕಂಡನು. ಶ್ರೀಮಂತರು ತಮಗೆ ಬೇಡವಾದುದ್ದನ್ನು ಕೊಟ್ಟರು ಆದರೆ ವಿಧವೆಯು ತನ್ನ ಬಳಿಯಿದ್ದನ್ನೆಲ್ಲ ಕೊಟ್ಟಳು ಎಂದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ತನ್ನನ್ನು ಆಲಿಸುತ್ತಿದ್ದ ಎಲ್ಲರಿಗೂ, "ಈ ಬಡ ವಿಧವೆಯು ಬೇರೆ ಎಲ್ಲರಿಗಿಂತ ಹೆಚ್ಚಾಗಿ ಕೊಟ್ಟಳು" ಎಂದನು.

ನೋಡಿರಿ, ಯೇಸು ಇತರ ರಾಜರಂತೆ ದೊಡ್ಡ ದೊಡ್ಡ ಕಾಣಿಕೆಗಳನ್ನು ಕೊಡುವ ಶ್ರೀಮಂತರನ್ನು ಗೌರವಿಸುವವನಲ್ಲ. ಆತನ ರಾಜ್ಯದಲ್ಲಿ, ಹೆಚ್ಚಿನದನ್ನು ಕೊಡಲು ಜನರಿಗೆ ಹೆಚ್ಚು ಇರಬೇಕೆಂದೇನೂ ಇಲ್ಲ. ಈ ಲೋಕದ ಐಶ್ವರ್ಯವು ಹಾಳಾಗುತ್ತಿದೆ ಮತ್ತು ಆತನ ರಾಜ್ಯವು ಹತ್ತಿರವಾಗುತ್ತಿದೆ ಎಂದು ಯೇಸು ಕಲಿಸಿದನು, ಆದ್ದರಿಂದ ಆತನು ತನ್ನ ಹಿಂಬಾಲಕರಿಗೆ ಅವರ ಹೃದಯಗಳನ್ನು ವ್ಯರ್ಥವಾದ ಕಾರ್ಯಗಳೂ ಚಿಂತೆಗಳೂ ಇಲ್ಲದಂತೆ ನೋಡಿಕೊಳ್ಳಲು, ತನ್ನ ಮೇಲೆ ನಂಬಿಕೆಯಿಡಲು ಹೇಳಿದನು (21:13-19, 34-36).

ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:

•ದೊಡ್ಡದಾದ, ಆಡಂಬರದ ಕಾಣಿಕೆಗಿಂತಲೂ ಯೇಸು ಎರಡು ತಾಮ್ರದ ನಾಣ್ಯಗಳನ್ನು ಎಷ್ಟು ಗೌರವಿಸುತ್ತಾನೆ ಎಂಬುದನ್ನು ನೋಡಿರಿ. ಆತನ ರಾಜ್ಯದ ಸ್ವರೂಪದ ಕುರಿತು ಇದು ಏನನ್ನು ಹೇಳುತ್ತದೆ?

•ಲೂಕ 21: 34-36 ರಲ್ಲಿ ಯೇಸು ಕೊಟ್ಟ ಜ್ಞಾನಯುಕ್ತವಾದ ಎಚ್ಚರಿಕೆಯ ಕುರಿತು ಯೋಚಿಸಿರಿ. ಈ ವಾಕ್ಯಭಾಗವು ಈ ಸಮಯದಲ್ಲಿ ನಿಮ್ಮೊಂದಿಗೆ ಯಾವ ರೀತಿ ಮಾತನಾಡುತ್ತಿದೆ? ಈ ವಾರದಲ್ಲಿ ಯೇಸುವಿನ ಮಾತುಗಳಿಗೆ ನೀವು ಹೇಗೆ ಸ್ಪಂದಿಸುವಿರಿ?

•ಯೇಸು ಪ್ರವಾದಿಯಾದ ದಾನಿಯೇಲ ಮಾತುಗಳನ್ನು ಲೂಕ 21:27 ರಲ್ಲಿ ಪ್ರಸ್ತಾಪಿಸಿದನು.ದಾನಿಯೇಲ 7:13-14 ಅನ್ನು ಓದಿರಿ. ನೀವು ಅದರಲ್ಲಿ ಏನನ್ನು ಗಮನಿಸಿದ್ದೀರಿ?

•ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದಂಥದ್ದರ ಬಗ್ಗೆ ದೇವರಿಗೆ ಹೇಳಿರಿ, ಈ ಲೋಕದ ಪ್ರಯೋಜನಗಳಿಗಾಗಿ ನೀವು ಸಮಯ, ಹಣ ಅಥವಾ ಶ್ರದ್ಧೆಯನ್ನು ಯಾವ ವಿಷಯದಲ್ಲಿ ವ್ಯರ್ಥ ಮಾಡಿದ್ದೀರಿ ಎಂಬುದರ ಬಗ್ಗೆ ಪ್ರಾಮಾಣಿಕವಾಗಿ ತಿಳಿಸಿರಿ ಮತ್ತು ನಿಮ್ಮ ಒಲವನ್ನು ಯೇಸುವಿನ ರಾಜ್ಯದತ್ತ ತಿರುಗಿಸಲು ಏನೋ ಬೇಕೋ ಅದನ್ನು ಬೇಡಿಕೊಳ್ಳಿರಿ."

读经计划介绍

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.

More