ಸಮರ್ಪಣೆಮಾದರಿ

ಸಮರ್ಪಣೆ

3 ನ 3 ದಿನ

ಯೇಸುವಿಗಾಗಿ ಸಮರ್ಪಣೆ

ಯೇಸುವಿಗೆ ನಮ್ಮ ಸಮರ್ಪಣೆಯು ನಮ್ಮ ಎಲ್ಲಾ ಇತರ ಸಮರ್ಪಣೆಗಳಿಗೆ ಅಡಿಪಾಯದ ತಳಪಾಯವಾಗಿ

ಕಾರ್ಯನಿರ್ವಹಿಸುತ್ತದೆ.

ನಾವು ಆತನಿಗೆ ನಮ್ಮ ಸಮರ್ಪಣೆಯನ್ನು ಪ್ರತಿಜ್ಞೆ ಮಾಡುತ್ತೇವೆ ಮತ್ತು ಪ್ರತಿಯಾಗಿ ನಮ್ಮ ಎಲ್ಲಾ ಇತರ

ಸಮರ್ಪಣೆಗಳನ್ನು ನೆರವೇರಿಸುವ ಶಕ್ತಿಯನ್ನು ನಮಗೆ ದಯಪಾಲಿಸಲು ಆತನು ಬದ್ಧನಾಗಿರುತ್ತಾನೆ.

ನಮ್ಮ ಹೃದಯ, ಆತ್ಮ, ಮನಸ್ಸು ಮತ್ತು ಶಕ್ತಿಯ ಪ್ರತಿಯೊಂದು ನಾರಿನೊಂದಿಗೆ ಆತನನ್ನು ಪೂರ್ಣಹೃದಯದಿಂದ

ಪ್ರೀತಿಸಲು ನಾವು ಕರೆಯಲ್ಪಟ್ಟಿದ್ದೇವೆ ಮತ್ತು ಆತನು ಮೊದಲು ನಮ್ಮನ್ನು ಪ್ರೀತಿಸಿದರಿಂದ ನಾವು ಹಾಗೆ

ಮಾಡಲು ಅಧಿಕಾರ ಹೊಂದಿದ್ದೇವೆ. ನಮ್ಮ ಮೇಲಿರುವ ಆತನ ಪ್ರೀತಿಯನ್ನು ಅರ್ಥಮಾಡಿಕೊಳ್ಳುವುದು ಪರಸ್ಪರ

ವಿನಿಮಯ ಮಾಡಿಕೊಳ್ಳಲು ಮತ್ತು ಪ್ರತಿಯಾಗಿ ಆತನನ್ನು ಪ್ರೀತಿಸಲು ಸಮರ್ಪಣೆಯನ್ನು ಸುಲಭಗೊಳಿಸುತ್ತದೆ,

ಯಾಕೆಂದರೆ ಆತನು ಅಂತರ್ಗತವಾಗಿ ಪ್ರೀತಿಪಾತ್ರನಾಗಿದ್ದಾನೆ.

ಯೇಸುವಿಗೆ ಸಮರ್ಪಿತರಾಗಿರಲು, ನಾವು ನಮ್ಮ ಜೀವನದ ಪ್ರತಿ ಕ್ಷಣವನ್ನು ಸ್ವಇಚ್ಛೆಯಿಂದ ಆತನಿಗೆ

ಒಪ್ಪಿಸುತ್ತೇವೆ. ನಾವು ಉದ್ದೇಶಪೂರ್ವಕವಾಗಿ ನಮ್ಮ ದಿನದ ಪ್ರತಿಯೊಂದು ಭಾಗದಲ್ಲೂ ಆತನನ್ನು

ಸೇರಿಸಿಕೊಳ್ಳುತ್ತೇವೆ, ಆತನ ಪ್ರಸನ್ನತೆಯ ಬಗ್ಗೆ ನಿರಂತರವಾಗಿ ಅರಿವನ್ನು ಹೊಂದಿದ್ದು, ಪ್ರತಿಯಾಗಿ ಆತನು

ತವಕಿಸುವ ನಮ್ಮ ಪ್ರಸನ್ನತೆಯ ಅಮೂಲ್ಯವಾದ ಉಡುಗೊರೆಯನ್ನು ಆತನಿಗೆ ಕೊಡುತ್ತೇವೆ.

ಸಮರ್ಪಣೆಯು ಮಟ್ಟಗಳನ್ನು ಹೊಂದಿಲ್ಲ; ಅದು ಪೂರ್ಣ ಹೃದಯದಿಂದ ಆಗಿರಬೇಕು; ಅದು "ಸಮಸ್ತವೂ"

ಆಗಿರಬೇಕು. ಸತ್ಯವೇನೆಂದರೆ ದೇವರು ತನ್ನನ್ನು ಸಂಪೂರ್ಣವಾಗಿ ನಮಗೆ ಸಮರ್ಪಿಸಿದ್ದಾನೆ. ಆತನು ನಮ್ಮ

ಪರ ಇದ್ದಾನೆಯೇ ಹೊರತು ನಮ್ಮ ವಿರುದ್ಧವಲ್ಲ. ಆತನು ಎಂದಿಗೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು

ವಾಗ್ದಾನ ಮಾಡಿದ್ದಾನೆ; ಆತನು ಉಳಿದುಕೊಳ್ಳುವುದಕ್ಕಾಗಿ ಇಲ್ಲಿದ್ದಾನೆ. ಆತನು ನಮ್ಮನ್ನು ಆಶಿಸುತ್ತಾನೆ, ಮತ್ತು

ಆತನು ನಮ್ಮನ್ನು ಬಯಸುತ್ತಾನೆ.

ಈ ಬ್ರಹ್ಮಾಂಡದ ಸೃಷ್ಟಿಕರ್ತನು, ಎಲ್ಲಾ ಅರಸರಿಗೂ ಅರಸನೂ ಆಗಿರುವ ಈತನು ನಮ್ಮೊಂದಿಗೆ ಸಂಬಂಧವನ್ನು

ಬಯಸುತ್ತಾನೆ ಎಂಬ ಅಂಶವು ಉಸಿರುಕಟ್ಟುವಷ್ಟು ಸುಂದರವಾಗಿದೆ. ಇದು ಅಗಾಧವಾದದ್ದು, ಗ್ರಹಿಸಲಾಗದ

ಉಡುಗೊರೆ, ಆದರೂ ಕೆಲವೊಮ್ಮೆ ನಾವು ಅದನ್ನು ಲಘುವಾಗಿ ತೆಗೆದುಕೊಳ್ಳುತ್ತೇವೆ.

ಆತನು ಈಗಾಗಲೇ ನಮ್ಮನ್ನು ಕಂಡುಕೊಂಡಿದ್ದಾನೆ ಮತ್ತು ಆತನ ಪೂರ್ಣತೆ ಸೇರಿದಂತೆ ಸಮಸ್ತವನ್ನೂ

ಉದಾರವಾಗಿ ನಮಗೆ ದಯಪಾಲಿಸುತ್ತಾನೆ ಎಂದು ತಿಳಿದುಕೊಂಡು ನಾವು ಎಲ್ಲದಕ್ಕಿಂತ ಹೆಚ್ಚಾಗಿ ಆತನನ್ನು

ಹುಡುಕುವುದಕ್ಕೆ ಆದ್ಯತೆ ಕೊಡಬೇಕಾಗಿದೆ.

ನಮ್ಮ ಸಂಪೂರ್ಣತೆಯನ್ನು ಆತನಿಗೆ ಒಪ್ಪಿಸಿಕೊಡಲು ನಾವು ಸಮರ್ಪಿತರಾಗಿದ್ದೇವೆಯೇ, ಪ್ರತಿಯಾಗಿ ಆತನನ್ನು

ಸಂಪೂರ್ಣವಾಗಿ ಅಪ್ಪಿಕೊಳ್ಳುತ್ತೇವೆಯೇ?

ಇದು ಒಂದು ಸುಂದರವಾದ ವಿನಿಮಯವಾಗಿದೆ, ಒಬ್ಬರು ಮಾಡಬಹುದಾದ ಅತ್ಯಂತ ಆಳವಾದ

ಸಮರ್ಪಣೆಯಾಗಿದೆ, ಯಾಕೆಂದರೆ ಯೇಸುವಿಗೆ ಒಪ್ಪಿಸುವಲ್ಲಿ, ಆತನನ್ನು ಪ್ರತಿಯಾಗಿ ಹೊಂದುವ

ಹೋಲಿಸಲಾಗದ ಮತ್ತು ಎಲ್ಲವನ್ನೂ ಒಳಗೊಳ್ಳುವ ಉಡುಗೊರೆಯನ್ನು ನಾವು ಪಡೆಯುತ್ತೇವೆ.

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಸಮರ್ಪಣೆ

ಸಮರ್ಪಣೆಯ ನಿಘಂಟಿನ ವ್ಯಾಖ್ಯಾನವು "ಒಂದು ಕಾರಣಕ್ಕಾಗಿ, ಚಟುವಟಿಕೆ ಅಥವಾ ಸಂಬಂಧಕ್ಕೆ ಮೀಸಲಾಗಿರುವ ಸ್ಥಿತಿ ಅಥವಾ ಗುಣಮಟ್ಟವಾಗಿದೆ." ಕ್ರಿಸ್ತನ ಹಿಂಬಾಲಕರಾಗಿ, ನಾವು ಸಮರ್ಪಣೆಯ ಜೀವನವನ್ನು ನಡೆಸಲು ಕರೆಯಲ್ಪಟ್ಟಿದ್ದೇವೆ. ಸಮರ್ಪಣೆಯು ಪ್ರಬಲವಾದ ಶಕ್ತಿಯಾಗಿದ್ದು ಅದು ದೇವರೊಂದಿಗೆ ನಮ್ಮ ನಡಿಗೆಯಲ್ಲಿ ಸತತವಾಗಿ, ಸಹಿಸಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ನಮ್ಮನ್ನು ಪ್ರೇರೇಪಿಸುತ್ತದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Zero ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.zerocon.in/