ಸಮರ್ಪಣೆಮಾದರಿ

ಸಮರ್ಪಣೆ

3 ನ 2 ದಿನ

ನಂಬಿಗಸ್ತ ಮನೆವಾರ್ತೆಯವರಾಗಿರಲು ಸಮರ್ಪಣೆ

ನಮ್ಮ ಕರ್ತವ್ಯವು ಶ್ರದ್ಧೆಯಿಂದ ಮತ್ತು ಆತ್ಮಸಾಕ್ಷಿಯಿಂದ ನಮ್ಮ ಪರಲೋಕದ ತಂದೆಯಿಂದ ನಮಗೆ ಒಪ್ಪಿಸಲ್ಪಟ್ಟ

ವರಗಳು, ತಲಾಂತುಗಳು ಮತ್ತು ಸಂಪನ್ಮೂಲಗಳನ್ನು ನಿರ್ವಹಿಸುವುದೇ ಆಗಿದೆ.

ನಂಬಿಗಸ್ತ ಮನೆವಾರ್ತೆಯವರಾಗಿರಲು, ನಮ್ಮ ಸಮರ್ಪಣೆಯು ಎಲ್ಲವನ್ನೂ ಅರಸನನ್ನು ಗೌರವಿಸಲು ಮತ್ತು

ಆತನ ರಾಜ್ಯವನ್ನು ಮುಂದೆ ಸಾಗಿಸುವುದಕ್ಕಾಗಿ ಉದ್ದೇಶಪೂರ್ವಕವಾಗಿ ನಮ್ಮ ಸಮಯ, ಸಾಮರ್ಥ್ಯಗಳು

ಮತ್ತು ಹಣಕಾಸುಗಳನ್ನು ಉಪಯೋಗಿಸಿಕೊಳ್ಳುತ್ತದೆ.

ನಂಬಿಗಸ್ತ ಮತ್ತು ಜ್ಞಾನವಂತ ಮನೆವಾರ್ತೆಯವರ ಪ್ರಾಮುಖ್ಯತೆಯ ಬಗ್ಗೆ ಮಾತನಾಡುವ ದೃಷ್ಟಾಂತಗಳನ್ನು

ಯೇಸುವೇ ಕೊಡುವುದರ ಮೂಲಕ ಈ ವಾಕ್ಯಗಳು ಮನೆವಾರ್ತೆಯವರ ಮಹತ್ವದ ಕುರಿತಾದ ಬೊಧನೆಗಳಿಂದ

ಪ್ರತಿಧ್ವನಿಸುತ್ತದೆ (ಮತ್ತಾಯ 25:14-30).

ಅರಸನ ಮಕ್ಕಳಂತೆ, ನಮ್ಮ ಜೀವನದ ಪ್ರತಿಯೊಂದು ಭಾಗದಲ್ಲೂ ಆತನನ್ನು ಘನಪಡಿಸಲು ಮತ್ತು

ಮಹಿಮೆಪಡಿಸಲು ನಮ್ಮ ಅನನ್ಯ ತಲಾಂತು ಮತ್ತು ಸಾಮರ್ಥ್ಯಗಳನ್ನು ಉಪಯೋಗಿಸಲು ನಮಗೆ ಕರೆ

ಕೊಡಲಾಗಿದೆ.

ನಾವು ನಮ್ಮ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರವೀಣತೆಯನ್ನು ತೋರ್ಪಡಿಸಬೇಕಾಗಿದೆ (1 ಪೇತ್ರ 4:10, ಕೊಲೊಸ್ಸೆ

3:23, ಜ್ಞಾನೋಕ್ತಿಗಳು 3:27).

ಇದಲ್ಲದೆ, ನಮ್ಮ ಹಣಕಾಸಿನ ವಿಷಯದಲ್ಲಿ ನಂಬಿಗಸ್ತರಾಗಿರಲು ನಾವು ಕರೆಯಲ್ಪಟ್ಟಿದ್ದೇವೆ, ನಾವು ಹೊಂದಿರುವ

ಎಲ್ಲವೂ ಅಂತಿಮವಾಗಿ ದೇವರಿಗೆ ಸೇರಿದೆ ಎಂದು ತಿಳಿಯಬೇಕು ಮತ್ತು ಕೊರತೆಯಲ್ಲಿರುವವರಿಗೆ ಉದಾರವಾಗಿ

ಕೊಡಬೇಕಾಗಿದೆ.

ನಂಬಿಗಸ್ತ ಮನೆವಾರ್ತೆಯವರಾಗಿರುವುದು ನಮ್ಮ ಸಮರ್ಪಣೆಯನ್ನು ಕೇವಲ ಭೌತಿಕ ಸಂಪತ್ತನ್ನು ಮೀರಿಸುತ್ತದೆ,

ನಮ್ಮ ಕ್ರಿಯೆಗಳು ಮತ್ತು ವರ್ತನೆಗಳಿಗೂ ವಿಸ್ತರಿಸುತ್ತದೆ.

ನಾವು ನಮ್ಮ ಮಾತುಗಳ ಬಗ್ಗೆ ಗಮನಹರಿಸಬೇಕಾಗಿದೆ, ಚಾಡಿಹೇಳುವುದನ್ನು ತಪ್ಪಿಸಬೇಕು ಮತ್ತು ಶಾಂತತೆ

ಮತ್ತು ನೆಮ್ಮದಿಯ ಮನೋಭಾವವನ್ನು ಅನುಸರಿಸಬೇಕು (ಜ್ಞಾನೋಕ್ತಿ 16:28, 1 ಥೆಸಲೋನಿಕ 4:11).

ನಾವು ಮಾಡುವ ಎಲ್ಲವನ್ನು ಕರ್ತನಿಗಾಗಿಯೇ ಮಾಡಬೇಕು, ನಮ್ಮ ಯೋಗ್ಯನಾದ ದೇವರಿಗೆ ಆರಾಧನೆಯ

ಕ್ರಿಯೆಯಾಗಿ ನಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೇವೆ (ಕೊಲೊಸ್ಸೆ 3:23).

ನಂಬಿಗಸ್ತ ಮನೆವಾರ್ತೆಯವರಾಗಿರಲು ನಮ್ಮ ಅಚಲವಾದ ಸಮರ್ಪಣೆಯ ಮೂಲಕ, ನಾವು ದೇವರ

ಒದಗಿಸುವಿಕೆಗಾಗಿ ನಮ್ಮ ಆಳವಾದ ಗೌರವವನ್ನು ತೋರಿಸುತ್ತೇವೆ, ಆತನ ಬೋಧನೆಗಳಿಗೆ ನಮ್ಮ

ವಿಧೇಯತೆಯನ್ನು ತೋರ್ಪಡಿಸುತ್ತೇವೆ ಮತ್ತು ಅಂತಿಮವಾಗಿ ಆತನ ಹೆಸರಿಗೆ ಮಹಿಮೆಯನ್ನು ತರುತ್ತೇವೆ.

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಸಮರ್ಪಣೆ

ಸಮರ್ಪಣೆಯ ನಿಘಂಟಿನ ವ್ಯಾಖ್ಯಾನವು "ಒಂದು ಕಾರಣಕ್ಕಾಗಿ, ಚಟುವಟಿಕೆ ಅಥವಾ ಸಂಬಂಧಕ್ಕೆ ಮೀಸಲಾಗಿರುವ ಸ್ಥಿತಿ ಅಥವಾ ಗುಣಮಟ್ಟವಾಗಿದೆ." ಕ್ರಿಸ್ತನ ಹಿಂಬಾಲಕರಾಗಿ, ನಾವು ಸಮರ್ಪಣೆಯ ಜೀವನವನ್ನು ನಡೆಸಲು ಕರೆಯಲ್ಪಟ್ಟಿದ್ದೇವೆ. ಸಮರ್ಪಣೆಯು ಪ್ರಬಲವಾದ ಶಕ್ತಿಯಾಗಿದ್ದು ಅದು ದೇವರೊಂದಿಗೆ ನಮ್ಮ ನಡಿಗೆಯಲ್ಲಿ ಸತತವಾಗಿ, ಸಹಿಸಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ನಮ್ಮನ್ನು ಪ್ರೇರೇಪಿಸುತ್ತದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Zero ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.zerocon.in/