ಕರೆಮಾದರಿ

ಕರೆ

3 ನ 2 ದಿನ

ಆದರೆ ನಾನೇ ಯಾಕೆ?

ಬಲವಾಗಿ ಮತ್ತು ಆರೋಗ್ಯಕರವಾಗಿರಲು "ದೇಹಕ್ಕೆ" ಪ್ರತಿಯೊಂದು ಅಂಗವೂ ಪರಸ್ಪರ ಬೇಕು.

ಕ್ರಿಸ್ತನ ದೇಹ; ಸಭೆ, ನಾನಾವಿಧವಾದ ವರಗಳನ್ನು ಹೊಂದಿರುವ ವಿವಿಧ ಜನರಿಂದ ಕೂಡಿದೆ, ಇವೆಲ್ಲವೂ ಸಭೆಗೆ "ಸಭೆ" ಆಗಿರಲು ಅವಶ್ಯಕವಾಗಿವೆ.

ನಾವು ಪರಸ್ಪರ ಸಹಾಯಮಾಡಬೇಕು ಮತ್ತು ರಕ್ಷಿಸಬೇಕು.

ಸಭೆಯ ಯಾವುದೇ ಅಂಗವು ತನ್ನದೇ ಆದ ರೀತಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

ನಿಮ್ಮ ಪಾತ್ರವು ಬಹಳ ಅತ್ಯಲ್ಪವೆಂದು ನೀವು ಭಾವಿಸಬಹುದು, ಇದು ವೈರಿಯ ಸುಳ್ಳು, ಯಾಕೆಂದರೆ ಪ್ರತಿಯೊಂದು ಅಂಗವೂ ಮುಖ್ಯವಾಗಿದೆ.

ನೀವು ಮಹತ್ವವುಳ್ಳವರು!

ಕಾಲ್ಬೆರಳುಗಳು ಅಥವಾ ಬೆರಳುಗಳಿಲ್ಲದ ದೇಹ ಅಥವಾ ಕೈ ಇಲ್ಲದ ದೇಹವನ್ನು ಕಲ್ಪಿಸಿಕೊಳ್ಳಿ.

ಅಥವಾ ಇನ್ನೂ ಹೀನಾಯವಾಗಿ, ಕೇವಲ ಕಿವಿಗಳನ್ನು ಒಳಗೊಂಡಿರುವ ದೇಹವನ್ನು ಊಹಿಸಿಕೊಳ್ಳಿರಿ ... ಅದು ಭಯಾನಕ ದೃಶ್ಯವಾಗಿದೆ!

ನೀವು ಹೀಗೆ ಹೇಳಬಹುದು, "ಆದರೆ ದೇಹವು ಇನ್ನೂ ಹಲ್ಲು ಮತ್ತು ಕೆಲವು ಕಾಲ್ಬೆರಳುಗಳಿಲ್ಲದೆ ಕಾರ್ಯನಿರ್ವಹಿಸುತ್ತದೆ."

ಆದರೆ ಇಡೀ ದೇಹವಿಲ್ಲದಿದ್ದರೆ ಕಾಲ್ಬೆರಳು ಅಥವಾ ಹಲ್ಲು ಏನು ಮಾಡುತ್ತದೆ? ಎಂದು ನೀವೇ ಹೇಳಿರಿ.

ನೀವು ಬೇರೊಂದು ಅಂಗಕ್ಕೆ "ನೀನು ಹೆಚ್ಚು ಪ್ರಾಮುಖ್ಯವಲ್ಲ, ಆದ್ದರಿಂದ ನನಗೆ ನಿನ್ನ ಅಗತ್ಯವಿಲ್ಲ" ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಸತ್ಯವೇನೆಂದರೆ, "ನಾವು ಹೀಗೆ ಯೋಚಿಸುವ" ಅಂಗಗಳಿಗೆ ದೇವರು ದೊಡ್ಡ ಗೌರವವನ್ನು ಕೊಡುತ್ತಾನೆ. ಅವರು ಗೌರವವನ್ನು ಪಡೆಯುತ್ತಾರೆ ಏಕೆಂದರೆ ಅವರು ಮಾಡುವ ಯಾವುದೇ ಕೆಲಸವನ್ನು ಅವರು ಬಹಳ ನಮ್ರತೆಯಿಂದ ಮಾಡುತ್ತಾರೆ.

ನಮಗೆ ಇಡೀ ದೇಹವು ಪೂರ್ಣವಾಗಿ ಕಾರ್ಯನಿರ್ವಹಿಸಲು ಅಗತ್ಯವಿದೆ.

ಮುಖ್ಯ ವಿಷಯವೆಂದರೆ ಆತನ ಪ್ರೀತಿಯ ಸುವಾರ್ತೆಯನ್ನು ಸಾರಲು ಸಭೆಯಲ್ಲಿರುವ ಎಲ್ಲಾ ಜನರು ದೊಡ್ಡ ಉದ್ದೇಶಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತಾರೆ. ನಾವು ಯಾವಾಗಲೂ ಸಮಾನವಾಗಿ ಸಜ್ಜುಗೊಂಡಿಲ್ಲ, ಆದರೆ ನಾವು ಕರೆಗೆ ಸಮಾನವಾಗಿ ಸಮರ್ಪಿಸಿಕೊಳ್ಳಬೇಕು, ದೇವರು ನಮಗೆ ಕೊಟ್ಟ ವರಗಳು ಮತ್ತು ತಲಾಂತುಗಳಿಂದ ನಾವು ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ.

ಪ್ರತಿಯೊಂದು ಅಂಗವನ್ನು ಸಂಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಪ್ರತಿಯೊಂದು ಅಂಗವು ಮುಖ್ಯವಾಗಿದೆ.

ನೀವು ಪ್ರಾಮುಖ್ಯವಾದವರು.

ಆತನ ರಾಜ್ಯವು ಬರುವುದನ್ನು ನೋಡಲು, ಒಂದೇ ಗುರಿಯಿಂದ ನಾವು ಅನೇಕ ಅಂಗಗಳಿಂದ ಒಂದೇ ದೇಹವಾಗಿದ್ದೇವೆ!

ಬಾ, ಕರ್ತನಾದ ಯೇಸುವೇ, ಬಾ!

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಕರೆ

ಕರೆಯು ಶೂನ್ಯ ಕಾನ್ ನಲ್ಲಿ ಹುಟ್ಟಿಕೊಂಡ ಸತ್ಯವೇದ ಯೋಜನೆಯಾಗಿದೆ. ಇದು 3-ದಿನಗಳ ಪ್ರಯಾಣವಾಗಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಜಗತ್ತಿನಲ್ಲಿ ಹೊರಟುಹೋಗಿ ಆತನ ಪ್ರೀತಿಯನ್ನು ಸಾರಲು ದೇವರ ಕರೆಗೆ ಉತ್ತರಿಸುವುದರ ಮೇಲೆ ಕೇಂದ್ರೀಕೃತವಾಗಿದೆ; ಕ್ರಿಸ್ತನ ದೇಹದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪ್ರಾಮುಖ್ಯತೆಯನ್ನು ಗುರುತಿಸುವುದು ಮತ್ತು ನಮ್ಮ ವರಗಳು ಮತ್ತು ತಲಾಂತುಗಳನ್ನು ಇತರರಿಗೆ ಪ್ರವೀಣತೆಯಿಂದ ಸೇವೆ ಮಾಡಲು ಉಪಯೋಗಿಸುತ್ತೇವೆ, ಇದನ್ನು ನಾವು ಎಲ್ಲಿದ್ದೇವೆಯೋ ಅಲ್ಲಿಂದಲೇ ಪ್ರಾರಂಭಿಸುವುದಾಗಿದೆ. ಮುಖ್ಯ ಪದಗಳು - ಕರೆ, ಶೂನ್ಯ ಕಾನ್ ನಲ್ಲಿ, ಶೂನ್ಯ

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Zero ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.zerocon.in/