ಕರೆಮಾದರಿ

ಕರೆ

3 ನ 1 ದಿನ

ನೀವು ಕರೆಗೆ ಕಿವಿಗೊಡುತ್ತಿದ್ದೀರಾ?

ನಮ್ಮೆಲ್ಲರ ಜೀವನದಲ್ಲಿ ನಮಗೊಂದು ಕರೆ ಇದೆ - ಹೊರಟು ಹೋಗಲು ಕರೆ.

"ಲೋಕಕ್ಕೆಲ್ಲಾಹೋಗಿಸುವಾರ್ತೆಯನ್ನುಸಾರಿರಿ."

ನಮ್ಮ ಜೀವಿತಾವಧಿಯಲ್ಲಿ ನಾವು ಭೇಟಿಯಾಗುವ ಜನರಿದ್ದಾರೆ, ಅವರಿಗೆ ನಾವು ಯೇಸುವನ್ನು ಪ್ರತಿಬಿಂಬಿಸುತ್ತೇವೆ ಮತ್ತು ಅವರು ನೋಡುವ ಒಬ್ಬ ಯೇಸು ನಾವೇ ಆಗಿರಬಹುದು. ನೋವಿಗೆ ಒಳಗಾಗಿರುವ ಆತ್ಮಗಳಿಂದ ತುಂಬಿರುವ ಈ ಜಗತ್ತಿನಲ್ಲಿ, ನಾವು ಆತನ ಕೃಪೆಗೆ ಕೀಲಿಯನ್ನು ಹೊಂದಿದ್ದೇವೆ. ಆತನ ಪ್ರೀತಿಯನ್ನು ಪ್ರತಿಬಿಂಬಿಸಲು, ಆತನ ಬೆಳಕನ್ನು ಬೆಳಗಿಸಲು ಮತ್ತು ಆತನ ಮುಖವನ್ನು ಪ್ರಕಟಪಡಿಸಲು ನಾವು ಕರೆಯಲ್ಪಟ್ಟಿದ್ದೇವೆ.

ನಮಗೆ ವರಗಳು ಮತ್ತು ತಲಾಂತುಗಳನ್ನು ಕೊಡಲಾಗಿವೆ, ನಾವು ಆ ಸಾಧನಗಳನ್ನು ಉಪಯೋಗಿಸಲು ಕೌಶಲ್ಯವುಳ್ಳವರಾಗಿದ್ದೇವೆ; ಹಾಗಾದರೆ ಯಾರನ್ನಾದರೂ ಯೇಸುವಿಗೆ ಪರಿಚಯಿಸಲು ನಾವು ಅವುಗಳನ್ನು ಏಕೆ ಉಪಯೋಗಿಸಬಾರದು?

ಇದು ಉತ್ತಮ ಮಾರ್ಗವಾಗಿದೆ…

ಸುವಾರ್ತೆಯ ಶುಭ ಸುದ್ಧಿಯನ್ನು ಕೇಳದ ಜನರಿದ್ದಾರೆ.

ಅವರು ಆತನ ಪ್ರೀತಿಯ ರುಚಿಯನ್ನು ಕಂಡಿಲ್ಲ.

ಅವರು ಕೃಪೆ ಮತ್ತು ಕ್ಷಮಾಪಣೆಯನ್ನು ಅನುಭವಿಸಿಲ್ಲ. ದೇವರ ಸ್ಪಷ್ಟವಾದ ಪರಿಶುದ್ಧ ಪ್ರಸನ್ನತೆಯನ್ನು ಅನುಭವಿಸುವುದು ಎಂದರೆ ಏನೆಂದು ಅವರಿಗೆ ತಿಳಿದಿಲ್ಲ.

ಅವರು ಕಂಡಿಲ್ಲ, ಅವರು ರುಚಿ ನೋಡಿಲ್ಲ, ಅವರು ಕೇಳಿಲ್ಲ...

ನಮಗೆ ತೋರಿಸಲು ಮತ್ತು ಬಿತ್ತಲು ಕರೆ ಉಂಟು, ಮಾತನಾಡಲು ಕರೆ ಮತ್ತು ಕಿವಿಗೊಡಲು ಕರೆ. ಸೃಜನಾತ್ಮಕವಾಗಿರಲು ಕರೆ ಉಂಟು.

ಕರೆಯುವ ಆತನ ಸ್ವರವನ್ನು ನೀವು ಕೇಳುತ್ತೀದ್ದೀರಾ?

ಆತನ ಕರೆಗೆ ನಿಮ್ಮ ಉತ್ತರವೇನು?

ಅದು ಹೀಗಿದೆಯಾ, "ಇಗೋ, ಇದ್ದೇನೆ, ನನ್ನನ್ನು ಕಳುಹಿಸು?"

ಅಥವಾ ಅದು ಹೀಗಿದೆಯಾ, "ಬೇರೆ ಯಾರನ್ನಾದರೂ ಕಳುಹಿಸು"?

ಈ ಕರೆ ಆತನ ಮಿತಿಯಿಲ್ಲದ ಪ್ರೀತಿಯನ್ನು ತಿಳಿದಿರುವ ಪ್ರತಿಯೊಬ್ಬರಿಗೂ ಆಗಿದೆ. ನಿಮ್ಮ ಹಾಗೆ ಬೇರೆ ಯಾರೂ ಇದನ್ನು ಮಾಡಲು ಸಾಧ್ಯವಿಲ್ಲ, ನೀವು ಮೇಲಿನಿಂದ ಬಂದ ಏಕೈಕ ವರವಾಗಿದ್ದೀರಿ.

ನೀವು ಪ್ರಾಮುಖ್ಯವಾಗಿದ್ದೀರಿ. ಕರೆಗೆ ನಿಮ್ಮ ವಿಧೇಯತೆ ಪ್ರಾಮುಖ್ಯವಾಗಿದೆ.

ಕರೆಗೆ ಉತ್ತರಿಸುವ ಆಯ್ಕೆ ನಿಮ್ಮದಾಗಿದೆ.

ಚೆನ್ನಾಗಿ ಆಯ್ಕೆಮಾಡಿ. ಜೀವವನ್ನು ಆಯ್ಕೆಮಾಡಿ. ಪ್ರೀತಿಯನ್ನು ಆಯ್ಕೆಮಾಡಿಕೊಳ್ಳಿರಿ.

ಹೊರಟುಹೋಗಲು ಆಯ್ಕೆಮಾಡಿ...

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಕರೆ

ಕರೆಯು ಶೂನ್ಯ ಕಾನ್ ನಲ್ಲಿ ಹುಟ್ಟಿಕೊಂಡ ಸತ್ಯವೇದ ಯೋಜನೆಯಾಗಿದೆ. ಇದು 3-ದಿನಗಳ ಪ್ರಯಾಣವಾಗಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಜಗತ್ತಿನಲ್ಲಿ ಹೊರಟುಹೋಗಿ ಆತನ ಪ್ರೀತಿಯನ್ನು ಸಾರಲು ದೇವರ ಕರೆಗೆ ಉತ್ತರಿಸುವುದರ ಮೇಲೆ ಕೇಂದ್ರೀಕೃತವಾಗಿದೆ; ಕ್ರಿಸ್ತನ ದೇಹದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪ್ರಾಮುಖ್ಯತೆಯನ್ನು ಗುರುತಿಸುವುದು ಮತ್ತು ನಮ್ಮ ವರಗಳು ಮತ್ತು ತಲಾಂತುಗಳನ್ನು ಇತರರಿಗೆ ಪ್ರವೀಣತೆಯಿಂದ ಸೇವೆ ಮಾಡಲು ಉಪಯೋಗಿಸುತ್ತೇವೆ, ಇದನ್ನು ನಾವು ಎಲ್ಲಿದ್ದೇವೆಯೋ ಅಲ್ಲಿಂದಲೇ ಪ್ರಾರಂಭಿಸುವುದಾಗಿದೆ. ಮುಖ್ಯ ಪದಗಳು - ಕರೆ, ಶೂನ್ಯ ಕಾನ್ ನಲ್ಲಿ, ಶೂನ್ಯ

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Zero ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.zerocon.in/