BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುಮಾದರಿ

"ನಾವು ಲೂಕನ ಸುವಾರ್ತೆಯ ಮುಂದಿನ ಅಧ್ಯಾಯಗಳತ್ತ ಬರುವಾಗ, ಯೆಶಾಯನ ಸುರುಳಿಯನ್ನು ಓದಿದ ನಂತರ ಯೇಸು ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಅವುಗಳನ್ನು ಓದಬೇಕು. ಬಹಳ ಹಿಂದಿನಿಂದಲೂ ಯೆಶಾಯನನ್ನು ಸೂಚಿಸುತ್ತಿದ್ದ ವ್ಯಕ್ತಿಯು ಯೇಸುವೇ ಆಗಿದ್ದಾನೆ. ಬಡವರಿಗೆ ಶುಭವಾರ್ತೆಯನ್ನು ಸಾರಿ, ಮನಮುರಿದವರನ್ನು ಗುಣಪಡಿಸಿ, ಬಂಧಿತರನ್ನು ಬಿಡಿಸುವ ಅಭಿಷಿಕ್ತನು ಆತನೇ.
“ಈ ಹೊತ್ತು ನೀವು ನನ್ನ ಮಾತನ್ನು ಕೇಳುವಲ್ಲಿ ಈ ವೇದೋಕ್ತಿ ನೆರವೇರಿದೆ” ಎಂದು ಯೇಸು ಹೇಳಿದನು. ಯೇಸು ಈ ಮಾತನ್ನು ಹೇಳಿದ ನಂತರ ಬರುವ ಕಥೆಗಳು ಯೇಸುವಿನ ಶುಭವಾರ್ತೆ ಎಂಥದ್ದು ಎಂಬುದನ್ನು ತೋರಿಸುತ್ತದೆ. ಲೂಕನ ಸುವಾರ್ತೆಯ ಈ ವಿಭಾಗದಲ್ಲಿ ಆ ಶುಭವಾರ್ತೆಯನ್ನು ಹೀಗೆ ವರ್ಣಿಸಲಾಗಿದೆ: ಪ್ರಯಾಸಪಟ್ಟು ಆಯಾಸಗೊಂಡಿದ್ದ ಮೀನುಗಾರರಿಗೆ ಯೇಸು ಅದ್ಭುತಕರವಾಗಿ ಮೀನುಗಳನ್ನು ಒದಗಿಸಿದನು, ಕುಷ್ಠರೋಗಿಯನ್ನು ಗುಣಪಡಿಸಿದನು, ಪಾರ್ಶ್ವವಾಯು ರೋಗಿಯನ್ನು ಕ್ಷಮಿಸಿದನು ಮತ್ತು ಸಮಾಜದಿಂದ ತಿರಸ್ಕರಿಸಲ್ಪಟ್ಟಿದ್ದ ಸುಂಕ ವಸೂಲಿಗಾರರನನ್ನು ತನ್ನ ಸೇವೆಗಾಗಿ ನೇಮಿಸಿಕೊಂಡನು. ಇವೆಲ್ಲವೂ ಆಗಿನ ಧಾರ್ಮಿಕ ಗುಂಪುಗಳಲ್ಲಿ ತುಂಬಾ ಕೋಲಾಹಲವನ್ನು ಉಂಟುಮಾಡಿತು, ಮತ್ತು ಯೇಸು ವಿಶ್ರಾಂತಿ ದಿನವಾದ ಸಬ್ಬತ್ ದಿನದಲ್ಲಿ ಕೈ ಬತ್ತಿದವನನ್ನು ಗುಣಪಡಿಸಿದಾಗ ಅದು ಮತ್ತಷ್ಟು ಹೆಚ್ಚಾಯಿತು. ಧಾರ್ಮಿಕ ನಾಯಕರು ತುಂಬಾ ಕೋಪಗೊಂಡಿದ್ದರು. ಯೇಸುಏಕೆ ಸಬ್ಬತ್ ದಿನದ ಕುರಿತಾದ ಯೆಹೂದ್ಯರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾನೆ ಮತ್ತು ಕೆಟ್ಟ ತೀರ್ಮಾನಗಳನ್ನು ಮಾಡಿರುವ ಜನರೊಂದಿಗೆ ಸುತ್ತಾಡುತ್ತಿದ್ದಾನೆ ಎಂಬುದನ್ನು ಅವರಿಂದ ಅರ್ಥಮಾಡಿಕೊಳ್ಳಲು ಆಗಲಿಲ್ಲ.
ಆದರೆ ಯೇಸು ಶೋಷಿತರ ಪರವಾಗಿ ನಿಂತುಕೊಂಡು, ಯೆಹೂದ್ಯರ ಧಾರ್ಮಿಕ ನಾಯಕರಿಗೆ ಅವರ ಧರ್ಮಶಾಸ್ತ್ರದ ತಿರುಳನ್ನು ಮತ್ತು ಲೋಕವನ್ನು ತಲೆಕೆಳಗೆ ಮಾಡುವ ತನ್ನ ರಾಜ್ಯದ ಸ್ವರೂಪವನ್ನು ವಿವರಿಸಿ ಹೇಳಿದನು. ಆತನು ತನ್ನ ಕುರಿತು ಆರೋಗ್ಯವುಳ್ಳವರನ್ನು ವಾಸಿಮಾಡುವ ವೈದ್ಯನಲ್ಲ, ಆದರೆ ರೋಗಿಗಳನ್ನು ವಾಸಿಮಾಡುವ ವೈದ್ಯನು ಎಂದು ಹೇಳಿದನು. ವಿಶ್ರಾಂತಿಯ ದಿನವು ತುಳಿತಕ್ಕೊಳಗಾದವರನ್ನು ಪುನಃಸ್ಥಾಪಿಸುವುದಾಗಿದೆ ಎಂಬುದನ್ನು ಆತನು ಸ್ಪಷ್ಟಪಡಿಸಿದನು. ಯೇಸುವೇ ಅವರನ್ನು ಪುನಃಸ್ಥಾಪಿಸುವವನಾಗಿದ್ದಾನೆ. ಆತನು ಸಮಾಜದಲ್ಲಿನ ಶ್ರೇಷ್ಟರನ್ನು ಆರಿಸಿಕೊಳ್ಳಲಿಲ್ಲ; ಅದಕ್ಕೆ ಬದಲಾಗಿ, ಆತನು ಶೋಷಿತರನ್ನು ಪುನಃಸ್ಥಾಪಿಸಿದನು. ಶೋಷಿತರು ಆತನನ್ನು ಹಿಂಬಾಲಿಸಿದಾಗ, ಅವರು ಪುನಃಸ್ಥಾಪಿಸಲ್ಪಟ್ಟರಾಗಿ, ಆತನ ಸೇವೆಯನ್ನು ಮಾಡುವುದಕ್ಕಾಗಿ ಆತನೊಂದಿಗೆ ಸೇರಿಕೊಂಡರು.
ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:
•ಮೆಸ್ಸೀಯನಿಂದ ಪುನಃಸ್ಥಾಪಿಸಲ್ಪಟ್ಟು ಸ್ವಾತಂತ್ರ್ಯವನ್ನು ಹೊಂದಿರುವವರೇ (ಯೆಶಾಯ 61: 1-3) ಇತರರನ್ನು ಪುನಃಸ್ಥಾಪಿಸುವುದಕ್ಕಾಗಿ ತಮ್ಮ ಸ್ವಾತಂತ್ರ್ಯವನ್ನು ಹಂಚಿಕೊಳ್ಳುವವರು ಆಗಿದ್ದಾರೆ (ಯೆಶಾಯ 61: 4). ಲೂಕನ ಸುವಾರ್ತೆಯಲ್ಲಿ ಪ್ರಸ್ತಾಪಿಸಿರುವ ಯೆಶಾಯನ ಪ್ರವಾದನೆಯನ್ನು ಯೇಸು ಹೇಗೆ ನೆರವೇರಿಸಿದನು?
•ಪುನಃಸ್ಥಾಪಿಸುವಂತಹ ಯೇಸುವಿನ ಸ್ವಾತಂತ್ರ್ಯವನ್ನು ನೀವು ಹೇಗೆ ಅನುಭವಿಸಿದ್ದೀರಿ? ಈ ವಾರದಲ್ಲಿ ಆ ಸ್ವಾತಂತ್ರ್ಯವನ್ನು ನೀವು ಬೇರೆಯವರೊಂದಿಗೆ ಹಂಚಿಕೊಳ್ಳುವ ಒಂದು ರೀತಿಯು ತಿಳಿಸಿರಿ?
•ಸಿಮೋನನು, ಯಾಕೋಬನು, ಯೋಹಾನನು, ಜನಸಮೂಹವು, ಕುಷ್ಠರೋಗಿಯು, ಪಾರ್ಶ್ವವಾಯ ರೋಗಿಯು ಮತ್ತು ಆತನ ಸ್ನೇಹಿತರೂ ಶಾಸ್ತ್ರಿಗಳೂ ಫರಿಸಾಯರೂ ಯೇಸು ತಿಳಿಸಿದ ಶುಭವಾರ್ತೆಗೆ ಹೇಗೆ ಪ್ರತಿಕ್ರಿಯಿಸಿದರು? ಇಂದು ನಿಮ್ಮ ಪ್ರತಿಕ್ರಿಯೆ ಏನು?
•ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ನಿಮ್ಮನ್ನು ಪುನಃಸ್ಥಾಪಿಸುವ ಹೃದಯವುಳ್ಳ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. ನಿಮ್ಮ ಸ್ವಂತ ಜೀವನದಲ್ಲಿಯೂ ಸಮುದಾಯದಲ್ಲಿಯೂ ಎಲ್ಲಿ ಪುನಃಸ್ಥಾಪನೆಯ ಅಗತ್ಯವಿದೆ ಎಂದು ನಿಮಗೆ ಅನ್ನಿಸುತ್ತಿದ್ದೆಯೋ ಅದರ ಕುರಿತು ಆತನೊಂದಿಗೆ ಮಾತನಾಡಿರಿ. ಆತನು ನಿಮ್ಮ ಪ್ರಾರ್ಥನೆಯನ್ನು ಕೇಳುತ್ತಿದ್ದಾನೆ."
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು BibleProject ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://bibleproject.com/Kannada/
ವೈಶಿಷ್ಟ್ಯದ ಯೋಜನೆಗಳು

5 Spiritual Needs You Must Not Ignore

Holy, Healthy, Whole: Growing Fruits of the Spirit for Weight Loss and Wellness

Fatherless No More: Discovering God’s Father-Heart

The Story of God

5 Pillars of Faith & Finances: Anchored in God, Growing in Wealth

Heal Girl Heal

God's Will for Your Work

Celebrating Character

Helping Your Kids Know God's Good Design
