BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುಮಾದರಿ

"ಯೇಸು ತನ್ನ ವಿಶಿಷ್ಟ ರಾಜ್ಯದ ಕುರಿತಾದ ಪ್ರಣಾಳಿಕೆಯನ್ನು ಓದಿದ ನಂತರ, “ಮತ್ತೊಂದು - ಕೆನ್ನೆ- ತಿರುಗಿಸು ಎಂದ ರಾಜ” ಎಷ್ಟು ಶಕ್ತಿಶಾಲಿ ಎಂದು ನಾವು ಪ್ರಶ್ನಿಸಲು ಪ್ರಾರಂಭಿಸಬಹುದು. ಆದರೆ ಯೇಸುವಿನ ಕೃಪೆಯು ದೌರ್ಬಲ್ಯವುಳ್ಳದ್ದಲ್ಲ. ನಾವು ಈ ಪುಸ್ತಕವನ್ನು ಮುಂದೆ ಓದುವಾಗ, ಸತ್ತವರನ್ನೂ ಸಹ ಎಬ್ಬಿಸುವ ಶಕ್ತಿ ಯೇಸು ರಾಜನಿಗೆ ಇದೆ ಎಂಬುದನ್ನು ನಾವು ಕಾಣುತ್ತೇವೆ.
ಯೇಸು ಆಶ್ಚರ್ಯಕರವಾದ ಈ ಅದ್ಭುತಗಳನ್ನು ಮಾಡುವುದನ್ನು ಕಂಡು ಕೇಳಿದ ಅನೇಕ ಜನರುಆತನು ದೇವರ ಶಕ್ತಿಯಿಂದ ಇವುಗಳನ್ನು ಮಾಡುತ್ತಿದ್ದಾನೆಂದು ತಿಳಿದುಕೊಂಡರು. ಆದರೆ ಸ್ನಾನಿಕನಾದ ಯೋಹಾನನು ಸೆರೆಮನೆಯಲ್ಲಿದ್ದಾಗ ನಡೆಯುತ್ತಿರುವ ಈ ಸಂಗತಿಗಳನ್ನೆಲ್ಲಾ ಕಾಣಲೂ ಕೇಳಲೂ ಅವನಿಂದಾಗಲಿಲ್ಲ. ಯೇಸು ನಿಜವಾಗಿಯೂ ತಾನು ಭಾವಿಸಿದ್ದಂಥ ವ್ಯಕ್ತಿಯಾಗಿದ್ದಾನೋ ಅಲ್ಲವೋ ಎಂದು ಯೋಹಾನನು ಯೋಚಿಸಲಾರಂಭಿಸಿದನು. “ಬಡವರಿಗೆ ಶುಭವಾರ್ತೆಯು ಸಾರಲ್ಪಡುತ್ತಿದೆ” ಎಂದು ಪ್ರವಾದಿಯಾದ ಯೆಶಾಯನು ಹೇಳಿದ್ದ ಮಾತನ್ನು ಮತ್ತೊಮ್ಮೆ ಎತ್ತಿ ಹೇಳುವ ಮೂಲಕ ಯೇಸು ಯೋಹಾನನಿಗೆ ಮಾತೊಂದನ್ನು ಹೇಳಿ ಕಳುಹಿಸಿದನು. ಈ ಮಾತು ಬರಲಿಕ್ಕಿರುವ ಮೆಸ್ಸೀಯನನ್ನು ಸೂಚಿಸುತ್ತಿದೆ ಎಂಬುದು ಯೋಹಾನನಿಗೆ ತಿಳಿದಿತ್ತು. ಆದರೆ ಮೆಸ್ಸೀಯನು “ಸೆರೆಯವರಿಗೆ ಸ್ವಾತಂತ್ರ್ಯವನ್ನು” ಪ್ರಚುರಪಡಿಸುವನು ಎಂದು ಮುಂತಿಳಿಸುವಂಥ ಯೆಶಾಯನ ಪುಸ್ತಕದಲ್ಲಿರುವ ಮುಂದಿನ ವಚನಗಳು ಸಹ ಅವನಿಗೆ ತಿಳಿದಿದ್ದವು, ಹಾಗಾದರೆ ಯೋಹಾನನು ಏಕೆ ಇನ್ನೂ ಸೆರೆಯಲ್ಲಿದ್ದಾನೆ? ಯೇಸು ಅವನನ್ನು ಮರೆತುಬಿಟ್ಟರಾ? ಯೇಸು ಯೋಹಾನನ ಸಂಕಟವನ್ನು ನೋಡಿ, "ನನ್ನ ವಿಷಯದಲ್ಲಿ ಸಂಶಯಪಡದವನೇ ಧನ್ಯನು" ಎಂಬ ವಾಗ್ದಾನವನ್ನು ಅದರೊಂದಿಗೆ ಸೇರಿಸಿ ಹೇಳಿದನು.
ಆದರೆ ಅನೇಕರು ಈ ಆಶೀರ್ವಾದವನ್ನು ನಿರಾಕರಿಸಿ ಯೇಸುವಿನ ಮೇಲೆ ಸಂಶಯಪಡುತ್ತಾರೆ, ವಿಶೇಷವಾಗಿ ಧಾರ್ಮಿಕ ನಾಯಕರು ಹಾಗೆ ಮಾಡುತ್ತಿದ್ದರು. ತಮ್ಮ ಜೀವನವನ್ನು ಅಸ್ತವ್ಯಸ್ತ ಮಾಡಿಕೊಂಡಿರುವ ಹೊರಗಿನವರ ಮೇಲೆ ಯೇಸು ತೋರಿದ ಉದಾರತೆಯನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ. ಆದರೆ ಅವರು ಅಸ್ತವ್ಯಸ್ತವಾದ ತಮ್ಮ ವಿಷಯಗಳನ್ನು ತನ್ನ ಬಳಿಗೆ ತೆಗೆದುಕೊಂಡು ಬರುವಾಗ ಅವರಿಗೆ ಏನು ಮಾಡಬೇಕೆಂದು ಯೇಸುವಿಗೆ ತಿಳಿದಿತ್ತು. ಉದಾಹರಣೆಗೆ, ಯೇಸು ಔತಣಕೂಟದಲ್ಲಿದ್ದಾಗ, ಒಬ್ಬ ಸ್ತ್ರೀಯು ತನ್ನ ಕೃತಜ್ಞತಾ ಪೂರ್ವಕವಾದ ಕಣ್ಣೀರಿನಿಂದ ಆತನ ಪಾದಗಳನ್ನು ತೊಳೆಯಲು ತನ್ನನ್ನು ತಗ್ಗಿಸಿಕೊಂಡಾಗ, ಯೇಸು ತನ್ನ ಕ್ಷಮಾಪಣೆಯ ಮೂಲಕ ಆಕೆಯ ಇಡೀ ಜೀವನವನ್ನು ತೊಳೆದು ಶುದ್ಧೀಕರಿಸಿದನು ಎಂದು ಲೂಕನು ಬರೆದಿದ್ದಾನೆ. ನಾವು ಆತನ ಬಳಿಗೆ ಬಂದಾಗ ಆತನು ನಮಗೂ ಕೂಡ ಅದೇ ರೀತಿ ಮಾಡಲು ಸಿದ್ಧನಿದ್ದಾನೆ.
ಇದುವೇ ಎಲ್ಲವನ್ನು ತಲೆಕೆಳಗಾಗಿ ಮಾಡುವ ವಿಭಿನ್ನವಾದ ರಾಜ್ಯ - ಅತಿ ದೊಡ್ಡದಾದ ಬದಲಾವಣೆಯ ಕಾರ್ಯ. ನಮ್ಮ ತಪ್ಪುಗಳು ನಮ್ಮನ್ನು ರಾಜನ ಬಳಿಗೆ ಹೋಗಲಿಕ್ಕಿರುವ ಅವಕಾಶವನ್ನು ಇಲ್ಲದಂತೆ ಮಾಡುತ್ತವೆ ಎಂದು ನಾವು ನಿರೀಕ್ಷಿಸುತ್ತಿರಬಹುದು, ಆದರೆ ಯೇಸುವು ಬೇರೆ ರಾಜರಂತೆ ಅಲ್ಲ. ಆತನು ಕೃಪೆಯುಳ್ಳವನಾಗಿದ್ದಾನೆ, ಆತನ ಬಳಿಗೆ ನಾವು ಸುಲಭವಾಗಿ ಹೋಗಬಹುದು - ಮರಣವಾಗಲಿ ಅಥವಾ ಸೆರೆಮನೆಯ ಗೋಡೆಗಳಾಗಲಿ ಆತನ ಜನರನ್ನು ಆತನ ಪ್ರೀತಿಯಿಂದ ಬೇರ್ಪಡಿಸಲು ಸಾಧ್ಯವಿಲ್ಲ.
ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:
•ಯೇಸು ಚಿಕ್ಕ ಹುಡುಗಿಯನ್ನು ಮತ್ತು ಯೌವನಸ್ಥನನ್ನು ಮರಣದಿಂದ ಜೀವಂತವಾಗಿ ಎಬ್ಬಿಸಿದ ಸನ್ನಿವೇಶದಲ್ಲಿದ್ದ ನೀವು ಇದ್ದಿದ್ದಾಗೆ ಊಹಿಸಿಕೊಳ್ಳಿರಿ. ನಿಮಗೆ ಹೇಗೆ ಅನಿಸುತ್ತದೆ? ನೀವು ಏನು ಮಾಡುವಿರಿ?
•ದೇವರು ನಿಮ್ಮನ್ನು ಮರೆತುಬಿಟ್ಟಿದ್ದಾನೆ ಎಂದಾಗಲಿ ಅಥವಾ ದೇವರ ಆಶೀರ್ವಾದಗಳು ನಿಮಗೆ ಸಿಕ್ಕಬೇಕಾದ ಒಂದು ಆಶೀರ್ವಾದವು ನಿಮಗೆ ಸಿಕ್ಕಿಲ್ಲ ಎಂದಾಗಲಿ ನಿಮಗೆ ಅನಿಸುತ್ತಿದೆಯೇ? ಯೇಸು ಜನಸಮೂಹಕ್ಕೆ ತಾನು ಕಾರ್ಯ ಮಾಡುತ್ತಿದ್ದೇನೆಂದೂ ಮತ್ತು ತನ್ನ ಆಶೀರ್ವಾದಗಳನ್ನು ನೋಡಲಾಗದಿದ್ದಾಗ ತನ್ನ ವಿಷಯದಲ್ಲಿ ಬೇಸರಗೊಂಡವರಿಗೆ ಆಶೀರ್ವಾದವನ್ನು ಕೊಡುತ್ತಾನೆಂದೂ ಭರವಸೆ ಕೊಡುತ್ತಿದ್ದಾನೆ. ಆ ಭರವಸೆಯು ನಿಮಗೆ ಹೇಗೆ ಸರಿಹೊಂದುತ್ತದೆ?
•ಯೇಸುವಿನ ಪಾದಗಳಿಗೆ ತೈಲವನ್ನು ಹಚ್ಚಿದ ಸ್ತ್ರೀಯು ಆತನ ಮೇಲಿದ್ದ ತನ್ನ ಪ್ರೀತಿಯನ್ನು ತೋರಿಸಲು ಹೆದರಲಿಲ್ಲ. ಅಂತಹ ವ್ಯಕ್ತಿಗಳು ಯಾರಾದರೂ ನಿಮಗೆ ಗೊತ್ತೇ? ಅವರು ಯೇಸುವಿನ ಮೇಲಿನ ಪ್ರೀತಿಯನ್ನು ಹೇಗೆ ತೋರಿಸುತ್ತಾರೆ?
•ಯೇಸುವಿನ ಮೇಲೆ ನಮಗಿರುವ ಪ್ರೀತಿಯು, ಆತನು ನಮ್ಮನ್ನು ಎಷ್ಟರ ಮಟ್ಟಿಗೆ ಕ್ಷಮಿಸಿದ್ದಾನೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವುದಕ್ಕಿರುವ ನೇರ ಅನುಪಾತದಂತಿದೆ. ನಿಮ್ಮ ಪಾಪಗಳೆಲ್ಲಾವುಗಳು ನಿಮಿತ್ತವಾಗಿ ನಿಮ್ಮನ್ನು ಕ್ಷಮಿಸುವಂತೆ ನೀವು ಯೇಸುವನ್ನು ಬೇಡಿಕೊಂಡಿದ್ದೀರಾ? ಹಾಗಿದ್ದಲ್ಲಿ, ಯೇಸು ನಿಮ್ಮನ್ನು ಎಷ್ಟರ ಮಟ್ಟಿಗೆ ಕ್ಷಮಿಸಿದ್ದಾನೆಂದು ಯೋಚಿಸಿರಿ –– ನಿಜವಾಗಿಯೂ ಅದರ ಬಗ್ಗೆ ಯೋಚಿಸಿರಿ. ಇಂದು ನೀವು ನಿಮ್ಮ ಪ್ರೀತಿಯನ್ನು ಯೇಸುವಿಗೆ ತೋರಿಸುವ ಒಂದು ರೀತಿ ಯಾವುದು?
•ನಿಮ್ಮ ಓದುವಿಕೆಯೂ ಪ್ರತಿಫಲನವೂ ನಿಮ್ಮ ಹೃದಯದ ಅಂತರಾಳದಿಂದ ಪ್ರಾಮಾಣಿಕವಾದ ಪ್ರಾರ್ಥನೆಯನ್ನು ಮಾಡುವಂತೆ ನಿಮ್ಮನ್ನು ಪ್ರೇರೇಪಿಸಲಿ."
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು BibleProject ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://bibleproject.com/Kannada/
ವೈಶಿಷ್ಟ್ಯದ ಯೋಜನೆಗಳು

5 Spiritual Needs You Must Not Ignore

Holy, Healthy, Whole: Growing Fruits of the Spirit for Weight Loss and Wellness

Fatherless No More: Discovering God’s Father-Heart

The Story of God

5 Pillars of Faith & Finances: Anchored in God, Growing in Wealth

Heal Girl Heal

God's Will for Your Work

Celebrating Character

Helping Your Kids Know God's Good Design
