ಚಿಂತೆಯನ್ನು ಅದರ ಆಟದಲ್ಲೇ ಸೋಲಿಸುವುದುಮಾದರಿ

ಒಂದೊಂದೇ ದಿನದಂತೆ
ಪ್ರತಿ ದಿನದಲ್ಲಿ ಅದರದ್ದೇ ಆದ ಕಷ್ಟಗಳಿರುತ್ತವೆ. ನೀವು ಅದಕ್ಕೆ ಸಮ್ಮತಿಸುತ್ತೀರೋ ತಿಳಿಯದು ಆದರೆ ಅದು ಸತ್ಯ. ಪ್ರತಿ ದಿನ ನಮ್ಮ ಮನೆಯಲ್ಲಾಗಲಿ, ಉದ್ಯೋಗದಲ್ಲಿ, ಮಕ್ಕಳೊಂದಿಗೆ ಆಗಿರಬಹುದು, ಬಂಧುಗಳು ಮತ್ತು ಸ್ನೇಹಿತರಲ್ಲಿ ಆಗಿರಬಹುದು ನಮಗೆ ಅಗತ್ಯವಿರುವ ಕರುಣೆಗಳು ಹೊಸದಾಗಿ ದೊರಕುತ್ತವೆ. ಇದಕ್ಕಾಗಿ ನಾವು ಪ್ರತಿ ದಿನವು ಬರುವಾಗ ಆ ದಿನವನ್ನು ಅನುಭವವಿಸಿ, ಏರಿಳಿತಗಳು, ಏಳುಬೀಳುಗಳನ್ನು, ನಷ್ಟಗಳು ಮತ್ತು ಲಾಭಗಳನ್ನು ಸ್ವೀಕರಿಸಿಕೊಳ್ಳಬೇಕು. ಬಹಳಷ್ಟು ಸಮಯಗಳಲ್ಲಿ ಮರುದಿನ, ಅಥವಾ ಮುಂದಿನ ವಾರ ಅಥವಾ ಮುಂದಿನ ತಿಂಗಳು ಸಹ ಏನು ಮಾಡಿ ಮುಗಿಸ ಬೇಕಿದೆ ಎಂಬುದರ ಬಗ್ಗೆ ಆಲೋಚಿಸುವಾಗ ಚಿಂತೆಯು ನಮ್ಮ ಹೃದಯವನ್ನು ಕುದಿಯುವಂತೆ ಮಾಡುತ್ತದೆ. ಯೇಸು ಸ್ವತಃ ಶರೀರಧಾರಿಯಾಗಿ ಬಂದವನಾಗಿ ಹೇಳಿದ್ದೇನೆಂದರೆ ಭವಿಷ್ಯದ ಬಗ್ಗೆ ಚಿಂತಿಸುವುದು ವ್ಯರ್ಥ ಎಂಬುದೆ. ಆತನು ಮತ್ತಾಯ 6ನೇ ಅಧ್ಯಾಯದಲ್ಲಿ ನಮ್ಮ ಗಮನವನ್ನು ಹೊಲದಲ್ಲಿರುವ ಹೂಗಳು ಮತ್ತು ಆಕಾಶದಲ್ಲಿರುವ ಪಕ್ಷಿಗಳಾಗಿ ಜೀವನವನ್ನು ಹೇಗಿರುತ್ತದೋ ಹಾಗೆಯೇ ಅನುಭವಿಸುವು ಎಂಬುದರ ಕಡೆಗೆ ಸೆಳೆಯುತ್ತಾನೆ. ಚಿಂತೆಗಳಿಲ್ಲ, ಒದ್ದಾಟವಿಲ್ಲ, ತಮಗೆ ಕೊಟ್ಟ ರೀತಿಯಲ್ಲಿ ಜೀವನವನ್ನು ನಡಿಸುತ್ತವಷ್ಟೇ. 1 ಪೇತ್ರ 5:7ರ ದಿ ಮೆಸ್ಸೇಜ್ ತರ್ಜುಮೆಯಲ್ಲಿ ಹೀಗಿರುತ್ತದೆ, “ಚಿಂತೆರಹಿತ ಜೀವನವನ್ನು ದೇವರ ಮುಂದೆ ಜೀವಿಸಿರಿ; ಆತನು ನಿಮ್ಮ ವಿಷಯದಲ್ಲಿ ಬಹಳ ಜಾಗರೂಕನಾಗಿರುತ್ತಾನೆ.” ಅದು ಎಂತಹ ಒಂದು ಉತ್ತೇಜನಕರವಾದ ಮಾತು, ಚಿಂತೆರಹಿತವಾಗಿ ಜೀವಿಸುತ್ತಾ ಲೋಕದ ಭಾರವನ್ನು ನಮ್ಮ ಬಾಹುಗಳ ಮೇಲೆ ಹೊರದೆ ಇರುವುದು. ಇದು ನಾವು ಪ್ರತಿ ದಿನವನ್ನು ದೇವರು ಮುಂದಾಗಿ ಆ ದಿನದಲ್ಲಿ ಸಾಗಿ ಆತನು ನಮಗೆ ಬೆಂಬಲವಾಗಿದ್ದಾನೆಂಬ ದೃಢನಂಬಿಕೆಯೊಂದಿಗೆ ಆರಂಭಿಸುವಂತೆ ಮಾಡತಕ್ಕದ್ದು. ಅಲ್ಲದೆ ಮರುದಿನವು ಎಷ್ಟೇ ಭಯ ಹುಟ್ಟಿಸುವಂತಿದ್ದರೂ ಆತನು ಕಾಲಾತೀತನಾಗಿ ಜೀವಿಸುವವನು ಮತ್ತು ಎಲ್ಲವನ್ನು ಬಲ್ಲವನಾಗಿರುವುದರಿಂದ ಆತನು ಮರುದಿನದ ಮನ್ನಾವನ್ನು ನೋಡಿಕೊಳ್ಳುವನು ಎಂಬ ಸರಳವಾದ ನಂಬಿಕೆಯೊಂದಿಗೆ ದಿನವನ್ನು ಮುಗಿಸುವಂತೆಯೂ ನಮಗೆ ಸಹಾಯ ಮಾಡುವುದು. ಅಂದರೆ ಆತನು ಏನೇ ಎದುರಾದರೂ ಅದನ್ನು ನಿಭಾಯಿಸಲು ಜ್ಞಾನವನ್ನು, ಅಡೆತಡೆಗಳನ್ನು ಜಯಿಸುವ ಶಕ್ತಿಯನ್ನು ಮತ್ತು ಉತ್ತಮವಾಗಿ ಮುಕ್ತಾಯಗೋಳಿಸಲು ಸೈರಣೆಯನ್ನು ನನಗೆ ಅನುಗ್ರಹಿಸುವನು ಎಂದಾಗಿದೆ. ಒಂದೊಂದು ದಿನವನ್ನು ಎದುರಿಸುತ್ತಾ ಸಾಗುವಾಗ ನಮಗಿರುವ ಪ್ರತಿ ಕ್ಷಣದಲ್ಲಿ ಹೇಗೆ ಇರಬೇಕು ಮತ್ತು ಆನಂದಿಸಬೇಕು ಎಂಬುದನ್ನು ಕಲಿಯುವೆವು. ನಮ್ಮ ಜೀವನಗಳನ್ನು ಚಿಂತೆಯು ನಿಯಂತ್ರಿಸಲಾರಂಭಿಸುವಾಗ, ನಮ್ಮ ಜೀವನದಲ್ಲಿ ಹೆಣೆಯಲ್ಪಟ್ಟಿರುವ ಆ ಸರಳವಾದ ಸಂತೋಷಗಳನ್ನು ಕಳಕೊಳ್ಳುತ್ತೇವೆ, ಶಾರೀರಿಕವಾಗಿ ಉಪಸ್ಥಿತರಿದ್ದೇವೆ ಆದರೆ ಮಾನಸಿಕವಾಗಿ ನಮ್ಮ ಸುತ್ತಲಿನವರ ಜೀವಿತಗಳಿಂದ ಅನುಪಸ್ಥಿತರಾಗಿರುತ್ತೇವೆ. ಸಂಬಂಧಗಳಿಗೆ ಹಾನಿಯಾಗುವುದು ಮತ್ತು ನಮ್ಮ ಆರೋಗ್ಯವು ಅನೇಕ ಸಾರಿ ಅದರ ಫಲಿತವಾಗಿ ನಷ್ಟ ಅನುಭವಿಸುವುದು. ನಿಮ್ಮ ಕಿಟಕಿಯಲ್ಲಿ ಹಾರಿ ಹೋಗುವ ಪಕ್ಷಿಗಳ ಅಥವಾ ನಿಮ್ಮ ತೋಟದಲ್ಲಿ ಅಷೊಂದು ರಮ್ಯವಾಗಿ ಬೆಳೆಯುತ್ತಿರುವ ಹೂಗಳ ಪೋಟೊವನ್ನು ನಿಮ್ಮ ಮನಸ್ಸಿನ ಫಲಕದಲ್ಲಿ ತೆಗೆದುಕೊಳ್ಳಿರಿ, ಮತ್ತು ಜೀವನದ ಪ್ರತಿ ಕ್ಷಣವನ್ನು ಆನಂದಿಸಿರಿ. ನೀವು ಬೇರೊಬ್ಬರನ್ನು ಹೇಗೆ ಆಶೀರ್ವದಿಸಬಲ್ಲಿರಿ ಅಥವಾ ಉತ್ತೇಜಿಸಬಲ್ಲಿರಿ ಎಂದು ಪ್ರತಿದಿನವನ್ನು ಅಮೂಲ್ಯವಾಗಿ ಮಾಡಿಕೊಳ್ಳಿರಿ. ನಮಗೆ ಒಂದೇ ಒಂದು ಜೀವನವಿದೆ, ಆ ಜೀವನವನ್ನು ಜೀವಿಸುವುದು ನಮಗೆ ಬಿಟ್ಟಿದ್ದು. ಚಿಂತೆಯು ಒಂದು ದಾರಿಯೇ ಇಲ್ಲದ ಬೀದಿಯ ಅಂತ್ಯವಲ್ಲ, ನೀವು ಪ್ರತಿ ದಿನವನ್ನು ಅದು ಬಂದಂತೆ ಅನುಭವಿಸುತ್ತಾ ನಾಳೆ ಏನಾಗುವದೋ ಎಂದು ಸಂಷ್ಕರಣಗೊಳಿಸಿಕೊಳ್ಳದಿದ್ದರೆ ಅದು ನಿಮ್ಮನ್ನು ಜೀವನದ ಹೆದ್ದಾರಿಗೆ ನಡೆಸುವ ಒಂದು ಅಡ್ಡ ದಾರಿಯಂತೆ ಆಗುತ್ತದಷ್ಟೆ. ನೀವು ಒಂದಿಷ್ಟು ನಿಧಾನಗೊಂಡು ದಿನವನ್ನು ಸುಮ್ಮನೆ ಆನಂದಿಸುವದಕ್ಕೆ ಸಿದ್ಧರಾ?
ಪ್ರಾರ್ಥನೆ:
ಪ್ರಿಯ ಕರ್ತನೇ,
ನಾನು ಎಚ್ಚರವಾಗುವಾಗ ಬರುವ ಒಂದೊಂದು ದಿನಕ್ಕಾಗಿ ನಿನಗೆ ಸ್ತೋತ್ರ. ಜೀವನ, ಆರೋಗ್ಯ ಮತ್ತು ಬಲ ನೀಡಿದ್ದಕ್ಕೆ ಕೃತಜ್ಞತೆಯುಳ್ಳವನಾಗಿದ್ದೇನೆ/ಕೃತಜ್ಞತೆಯುಳ್ಳವಳಾಗಿದ್ದೇನೆ. ಈ ದಿನವನ್ನು ಅದರ ಪೂರ್ಣ ಸಾಮರ್ಥ್ಯದಲ್ಲಿ ಆನಂದಿಸುವಂತೆ ಸಹಾಯ ಮಾಡು, ನಾಳೆಯ ಕುರಿತಾದ ಚಿಂತೆಗಳನ್ನು ತೆಗೆದು ಹಾಕಿ ಅದರ ಸ್ಥಾನದಲ್ಲಿ ನಂಬಿಕೆಯನ್ನು ತುಂಬಿಸು.
ಯೇಸುವಿನ ನಾಮದಲ್ಲಿ,
ಆಮೆನ್!
ಈ ಯೋಜನೆಯ ಬಗ್ಗೆ

ಎಲ್ಲಾ ವಿಧವಾದ ಚಿಂತೆಯು ನಮ್ಮನ್ನು ಎಡವುವಂತೆ ಮಾಡಿ ಭಯದಲ್ಲಿ ಕಟ್ಟಿ ಹಾಕುವದಾಗಿದ್ದು ನಮ್ಮನ್ನು ದುರ್ಬಲಗೊಳಿಸಬಲ್ಲದು. ಇದೇ ಕಥೆಯ ಅಂತ್ಯವಲ್ಲವಷ್ಟೇ, ಏಕೆಂದರೆ ಯೇಸುವಿನಲ್ಲಿ ನಮಗೆ ಹೋರಾಟವನ್ನು ಜಯಿಸುವದಕ್ಕೆ ಸ್ವಾತಂತ್ರ ಮತ್ತು ಕೃಪೆ ದೊರಕುತ್ತವೆ. ನಾವು ಅದನ್ನು ಕೇವಲ ಜಯಿಸುವುದಷ್ಟೇ ಅಲ್ಲ, ಆದರೆ ದೇವರ ವಾಕ್ಯದ ಹಾಗೂ ದೇವರ ಸಮ್ಮುಖವು ನಮ್ಮೊಂದಿಗೆ ಇರುತ್ತದೆಂಬ ನಿರಂತರವಾದ ನಿಶ್ಚಯತೆಯ ನಿನಿಮಿತ್ತವಾಗಿ ನಾವು ಅದಕ್ಕಾಗಿ ಉತ್ತಮಗೊಳಿಸಲ್ಪಡಬಲ್ಲೆವು.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಆರ್ ಜಿಯಾನ್ ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: https://www.wearezion.co/bible-plan
ವೈಶಿಷ್ಟ್ಯದ ಯೋಜನೆಗಳು

Who Controls Your Thoughts?

Heart Over Hype: Returning to Authentic Faith

God's Purposes in Motherhood

Bible in a Year Through Song

Connect With God Through Remembrance | 7-Day Devotional

I Am Happy: Finding Joy in Who God Says I Am

Spirit + Bride

Romans: Faith That Changes Everything

REDEEM: A Journey of Healing Through Divorce and Addiction
