ಚಿಂತೆಯನ್ನು ಅದರ ಆಟದಲ್ಲೇ ಸೋಲಿಸುವುದುಮಾದರಿ

ಅದರ ಹೆಸರು ಹೇಳಿ ಕರೆದು ಬಿಡಿರಿ
ನೀವು ಸುಲಭವಾಗಿ ಚಿಂತೆಗೀಡಾಗುವವರಾ? ನಿಮಗೆ ಅತಿ ಅನಾನುಕೂಲ ಸಮಯದಲ್ಲಿ ಕೈಕಾಲುಗಳೇ ಚಲಿಸದಂತಾಗುವ ಆತಂಕಗಳು ಸಂಭವಿಸುತ್ತವಾ? ನೀವು ಒತ್ತಡಕ್ಕೆ ಒಳಗಾಗಿ ಅನೇಕ ಸಾರಿ ಆಘಾತಕರವಾದ ರೀತಿಯಲ್ಲಿ ಸಮಾಧಾನ ಕಳೆದುಕೊಳ್ಳುವಿರಾ?
ನೀವು ಚಿಂತೆಯಿಂದ ನಲುಗುತ್ತೀರಿ ಎಂದು ಒಪ್ಪಿಕೊಂಡರೆ ತಪ್ಪಿಲ್ಲ. ಅರ್ಧ ಸಮಸ್ಯೆಯು ಆ ಸಮಸ್ಯೆಯನ್ನು ಅಂಟಿಕೊಂಡಿರುವ ಕಳಂಕವೇ ಆಗಿದೆ ಮತ್ತು ನಾವು ಅನುಭವಿಸುತ್ತಿರುವುದನ್ನು ಯಾರಿಗೂ ಹೇಳದೆ ಮರೆಯಾಗಿಟ್ಟುಕೊಳ್ಳಬೇಕೆಂದು ಅಂದುಕೊಳ್ಳುತ್ತೇವೆ. ನಾವು ದೇವರ ಮುಂದೆ, ನಮ್ಮೊಂದಿಗೆ, ಮತ್ತು ವಿಶ್ವಾಸರ್ಹ ಸ್ನೇಹಿತರ ಮುಂದೆ ತೆರೆದ ಮನಸ್ಸಿನಿಂದ ನಾವು ಈ ಅಗೋಚರ ಸಂಗತಿಯೊಂದಿಗೆ ಹೋರಾಡುತ್ತಿದ್ದೇವೆ ಆದರೆ ಈ ವೈರಿಯು ನಿಜವೆಂದು ಮಾತನಾಡಿದರೆ ಸ್ವತಂತ್ರದ ಅನುಭವ ಮಾಡುವೆವು. ನಮ್ಮನ್ನು ಬಂಧಿಗಳಾಗಿ ಇಟ್ಟುಕೊಳ್ಳುವ ಯಾವದನ್ನೇ ಆಗಲಿ ಕತ್ತಲೆಯೊಳಗಿಂದ ಬೆಳಕಿಗೆ ಬರುವಂತೆ ಹೆಸರು ಹೇಳಿ ಕರೆದಾಗ ಅದು ತನ್ನ ಶಕ್ತಿಯನ್ನು ಕಳಕೊಳ್ಳುತ್ತದೆ. ಬೆಳಕಿನಲ್ಲಿ ನಾವು ನಾವು ಯಾವುದರೊಂದಿಗೆ ಹೋರಾಡುತ್ತಿದ್ದೇವೆಂಬುದನ್ನು ಸ್ಪಷ್ಟವಾಗಿ ನೋಡಬಹುದು ಮತ್ತು ಅದಕ್ಕೆ ಕೊಡುತ್ತಿರುವ ಗಮನವು ಅಗತ್ಯವೋ ಎಂಬುದನ್ನು ದೃಢೀಕರಿಸಿಕೊಳ್ಳಿರಿ. ನಮ್ಮ ಚಿಂತೆಗಳು ಒಂದು ಅತಿ ವಾಸ್ತವಿಕವಾದ ಮತ್ತು ನಮ್ಮ ಜೀವನದಲ್ಲಿ ನಡೆಯುವ, ಬಾಧಿಸುವ ಸಂಗತಿಗಳನ್ನು ಆಧರಿಸಿ ಇರಬಹುದಾಗಿದೆ. ಅಥವಾ ಕಲ್ಪಿಸಿಕೊಂಡಿರುವ ಅಥವಾ ತಾರ್ಕಿಕವಲ್ಲದ ಭಯಗಳನ್ನು ಆಧರಿಸಿ ಇರಬಹುದಾಗಿದೆ. ನಾವು ಅದರೊಂದಿಗೆ ಹೋರಾಟ ಅನುಭವಿಸುತ್ತಿದ್ದೇವೆ ಎಂಬುದನ್ನು ಒಪ್ಪಿಕೊಂಡಾಗ, ಈ ಚಿಂತೆಯನ್ನು ಹುಟ್ಟಿಸುವ ಸಂಗತಿ ಯಾವುದು ಎಂದು ಹತ್ತಿರದಿಂದ ಗಮನಿಸಬಹುದು ಮತ್ತು ಅದನ್ನು ನಿಮ್ಮ ಚಿಂತೆಯೆನ್ನೆಲ್ಲಾ ನನ್ನ ಮೇಲೆ ಹಾಕಿರಿ ಎಂದು ಹೇಳುವ ದೇವರ ಮುಂದೆ ಅದನ್ನು ಇಡಬೇಕು ಏಕೆಂದರೆ ನಮಗಾಗಿ ಆತನು ಕಾಳಜಿ ಮಾಡುವನು. ಅದನ್ನು ಒಪ್ಪಿಕೊಂಡು ಅದರ ವಿಷಯದಲ್ಲಿ ಮಾತನಾಡಿದರೆ ಅದು ಚಿಂತೆಯ ಜೊತೆಯಲ್ಲಿ ಬರುವ ನಾಚಿಕೆ ಮತ್ತು ಅಪರಾಧಭಾವನೆಯನ್ನು ಕಡಿಮೆ ಮಾಡುತ್ತದೆ, ಅದೇ ವೇಳೆ ನಮ್ಮನ್ನು ಅತ್ಯುತ್ತಮವಾಗಿ ಬಲ್ಲಂತಹ ನಮ್ಮ ಸೃಷ್ಟಿಕರ್ತನಿಂದ ಸಹಾಯವನ್ನು ಕೋರುವಂತೆ ನಮ್ಮನ್ನು ಶಕ್ತರನ್ನಾಗಿಸುತ್ತದೆ. ನಾವು ಯಾವ ಭಾವನೆಗಳ ಜಂಜಾಟದಲ್ಲಿದ್ದೇವೋ ಅದರಲ್ಲಿ ದೇವರನ್ನು ಆತನ ವಾಕ್ಯದ ಮೂಲಕ ಮತ್ತು ಆತನೊಂದಿಗೆ ನಿರಂತರವಾಗಿ ಸಂಭಾಷಿಸುವ ಮೂಲಕ ಕರೆದು ತರುವುದರಿಂದ ನಾವು ನಮ್ಮ ಪರಿಸ್ಥಿತಿಯ ಕುರಿತು ಹೆಚ್ಚು ಸ್ಪಷ್ಟತೆಯನ್ನು ಅನುಭವಿಸಲಾರಂಭಿಸುವೆವು. ಅದು ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡದಿರಬಹುದು ಆದರೆ ಆತನ ಪ್ರಶಾಂತ ಸಮ್ಮುಖ ಮತ್ತು ಸೌಮ್ಯ ಬಲವು ನಿಮ್ಮನ್ನು ಆವರಿಸಿಕೊಳ್ಳುವುದು. ದೇವರ ಸಂಗಡ ನಿಮ್ಮ ಸಂಬಂಧವು ಆರಂಭಗೊಂಡ ಹಾಗೆ ನೀವು ದೇವರನ್ನು ದೇವರನ್ನಾಗಿರುವಂತೆಯೂ ನಿಮ್ಮನ್ನು ನೀವೇ ಆಗಿರುವಂತೆಯೂ ಬಿಡುವದಕ್ಕೆ ಆ ನಿಯಂತ್ರಣ ಮಾಡಬೇಕೆಂಬುದನ್ನು ಬಿಟ್ಟುಕೊಡುವುದು ಅವಶ್ಯಕ ಎಂಬುದು ನಿಮಗೆ ಗೊತ್ತಾಗುವುದು. ದೇವರಿಗೆ ಅದನ್ನು ಒಪ್ಪಿಸಿ ಬಿಡುವುದು ಜೀವಿತ-ಕಾಲದಲ್ಲಿ-ಒಮ್ಮೆ ನಡೆಯುವ ಸಂಗತಿಯಲ್ಲ, ಅದು ಆಗಾಗ್ಗೆ ಮಾಡಬೇಕಾದ ಶಿಸ್ತು ಆಗಿರುತ್ತದೆ. ಕೆಲವೊಮ್ಮೆ ಅದು ಅನುದಿನ ಮಾಡಬೇಕಾದ ಸಂಗತಿಯಾಗುತ್ತದೆ. ದೇವರು ತೀರ್ಪು ಅಥವಾ ಒರಟುತನವಿಲ್ಲದೆ ನಿಮ್ಮನ್ನು ಪ್ರೀತಿಸುವ ಮತ್ತು ಕೋಮಲತೆಯುಳ್ಳ ಪರಲೋಕದ ತಂದೆಯಂತೆ ನಿಮ್ಮನ್ನು ಪೋಷಿಸುವನೆಂದು ವಿಶ್ವಾಸ ಇಡಬಹುದಾಗಿದೆ. ಬದಲಾಗಿ ನೀವು ಆತನ ಅಪ್ಪುಗೆಯಲ್ಲಿ ವಿಶ್ರಮಿಸಿ ನಿಮ್ಮ ಹೃದಯದಲ್ಲಿರುವ ಪ್ರತಿ ಕಳಕಳಿಯನ್ನು ಆತನಿಗೆ ಒಪ್ಪಿಸಿಕೊಡುವಂತಾಗುವ ಹಾಗೆ ಆತನು ನಿಮ್ಮನ್ನು ತನಗೆ ನಿಕಟವಾಗಿ ಸೆಳೆದುಕೊಳ್ಳಲು ಹಂಬಲಿಸುತ್ತಾನೆ. ಅಲ್ಲದೆ ಆತನು ನಿಮ್ಮನ್ನು ಬಂಧಿಸಿ ಇಡುವ ಚಿಂತೆಯಿಂದ ಸ್ವತಂತ್ರಗೊಂಡು ಹೇರಳವಾದ ಸಂತೋಷ, ಸಮಾಧಾನ, ಮತ್ತು ವಿಶ್ರಾಂತಿಯಲ್ಲಿ ಜೀವಿಸಬೇಕೆಂದು ಬಯಸುತ್ತಾನೆ. ದೇವರು ನಿಮ್ಮ ಸೌಖ್ಯ ಮತ್ತು ಬಿಡುಗಡೆಯಲ್ಲಿ ಗಾಢವಾಗಿ ವಿನಿಯೋಗಿಸಿದ್ದಾನೆ, ಆದ್ದರಿಂದ ಆತನನ್ನು ಹೊರಗಿಡುವುದು ಬೇಡ. ನೀವು ಈ ದಿನ ಮೊದಲುಗೊಂಡು ಕ್ರಿಸ್ತನು ನಿಮಗೆ ಕೊಡುವ ಧೈರ್ಯದಿಂದ ಚಿಂತೆಯನ್ನು ಮುಖಾಮುಖಿಯಾಗಿ ಎದುರಿಸಿ ನಿಲ್ಲುವದಕ್ಕೆ ಮತ್ತು ಬಳಿಕ ದೀನತೆಯಿಂದ ಅದನ್ನು ನೋಡಿಕೊಳ್ಳುವಂತೆ ಆತನ ಕೈಗೆ ಒಪ್ಪಿಸುವಿರಾ?
ಪ್ರಾರ್ಥನೆ
ಪ್ರಿಯ ಕರ್ತನೇ,
ನಾನು __________ ವಿಷಯದಲ್ಲಿ ಚಿಂತೆಯೊಂದಿಗೆ ಹೋರಾಡುತ್ತಿದ್ದೇನೆ. ನೀನು ನನಗೆ ಸಹಾಯ ಮಾಡಬೇಕೆಂದು ಕೋರುತ್ತೇನೆ. ನಾನು ನಿನ್ನನ್ನು ಗಟ್ಟಿಯಾಗಿ ಹಿಡಿದುಕೊಳ್ಳುವದನ್ನು ಬಿಟ್ಟು ನನ್ನ ಭಯಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಕ್ಕೆ ನನ್ನನ್ನು ಕ್ಷಮಿಸು. ಶಿಲುಬೆಯ ಮೇಲೆ ನಿನ್ನ ಕುಮಾರನು ಮಾಡಿ ಮುಗಿಸಿರುವ ಕೆಲಸಕ್ಕಾಗಿ ಕೃತಜ್ಞತೆಗಳು, ಅದಕ್ಕೆ ಸರ್ವಕಾಲಕ್ಕೂ ಇಂದೇ ನನ್ನ ಚಿಂತೆಗಳು ಜಡಿಯಲ್ಪಟ್ಟಿವೆ. ಸ್ವತಂತ್ರವಾಗಿ ಜೀವಿಸಲು ನೀನು ನನಗೆ ಕೊಟ್ಟಿರುವ ಜೀವನವನ್ನು ಆನಂದಿಸುವಂತೆ ನನಗೆ ಸಹಾಯ ಮಾಡು.
ಯೇಸುವಿನ ನಾಮದಲ್ಲಿ,
ಆಮೆನ್!
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ಎಲ್ಲಾ ವಿಧವಾದ ಚಿಂತೆಯು ನಮ್ಮನ್ನು ಎಡವುವಂತೆ ಮಾಡಿ ಭಯದಲ್ಲಿ ಕಟ್ಟಿ ಹಾಕುವದಾಗಿದ್ದು ನಮ್ಮನ್ನು ದುರ್ಬಲಗೊಳಿಸಬಲ್ಲದು. ಇದೇ ಕಥೆಯ ಅಂತ್ಯವಲ್ಲವಷ್ಟೇ, ಏಕೆಂದರೆ ಯೇಸುವಿನಲ್ಲಿ ನಮಗೆ ಹೋರಾಟವನ್ನು ಜಯಿಸುವದಕ್ಕೆ ಸ್ವಾತಂತ್ರ ಮತ್ತು ಕೃಪೆ ದೊರಕುತ್ತವೆ. ನಾವು ಅದನ್ನು ಕೇವಲ ಜಯಿಸುವುದಷ್ಟೇ ಅಲ್ಲ, ಆದರೆ ದೇವರ ವಾಕ್ಯದ ಹಾಗೂ ದೇವರ ಸಮ್ಮುಖವು ನಮ್ಮೊಂದಿಗೆ ಇರುತ್ತದೆಂಬ ನಿರಂತರವಾದ ನಿಶ್ಚಯತೆಯ ನಿನಿಮಿತ್ತವಾಗಿ ನಾವು ಅದಕ್ಕಾಗಿ ಉತ್ತಮಗೊಳಿಸಲ್ಪಡಬಲ್ಲೆವು.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಆರ್ ಜಿಯಾನ್ ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: https://www.wearezion.co/bible-plan
ವೈಶಿಷ್ಟ್ಯದ ಯೋಜನೆಗಳು

Who Controls Your Thoughts?

Psalms of Lament

One Chapter a Day: Matthew

YES!!!

Walk With God: 3 Days of Pilgrimage

Horizon Church August Bible Reading Plan: Prayer & Fasting

The Way of the Wise

Prayer Altars: Embracing the Priestly Call to Prayer

Moses: A Journey of Faith and Freedom
