ಆದಿಕಾಂಡ ಮುನ್ನುಡಿ

ಮುನ್ನುಡಿ
“ಆದಿ” (ಜೆನೆಸಿಸ್) ಎಂದರೆ ಮೊದಲು ಆಥವಾ ಮೂಲ. ಈ ಜಗದ ಹಾಗೂ ಇದರ ಜನತೆಯ ಮೂಲ ಯಾವುದು? ಆದು ಮೊದಲು ಆದುದು ಹೇಗೆ? ಈ ಲೋಕದಲ್ಲಿ ನಾವು ಅನುಭವಿಸುತ್ತಿರುವ ಸಾವುನೋವುಗಳು, ದುಃಖದುಗುಡಗಳು ಹೇಗೆ ತಲೆಯೆತ್ತಿಕೊಂಡವು? ಇವು ಈ ಪುಸ್ತಕದ ವಿಷಯಗಳು.
ಈ ಲೋಕಕ್ಕೂ ಇದರ ನಿವಾಸಿಗಳಿಗೂ ಮೂಲ ಕಾರಣಕರ್ತ ದೇವರೇ. ತನಗೂ ದೇವರಿಗೂ ಆದಿಯಿಂದ ಇದ್ದ ಸಂಬಂಧವನ್ನು ಮಾನವ ಪಾಪದ ಮೂಲಕ ಕಡಿದುಕೊಂಡ. ಆದರೆ ದೇವರ ಕರುಣೆ ಅಷ್ಟಕ್ಕೆ ನಿಂತುಹೋಗಲಿಲ್ಲ.
ಮಾನವರೆಲ್ಲರನ್ನು ಉದ್ಧಾರಮಾಡಲು ದೇವರು ಅಬ್ರಹಾಮನನ್ನು ಆರಿಸಿಕೊಂಡರು. ಈ ಪುನರುದ್ಧಾರದ ಕಾರ್ಯದಲ್ಲಿ ಅಬ್ರಹಾಮನ ವಿಶ್ವಾಸ ಅಚಲವಾಗಿತ್ತಾದರೂ, ವಿಧೇಯತೆ ಅಪ್ರತಿಮವಾಗಿತ್ತಾದರೂ ದೇವರ ಪಾತ್ರವೇ ಪ್ರಪ್ರಥಮ ಹಾಗೂ ಪ್ರಧಾನ. ಅವರು ಪೂರ್ವಜರಾದ ಅಬ್ರಹಾಮ, ಇಸಾಕ ಮತ್ತು ಯಕೋಬರಿಗೆ ಮಾಡಿದ ವಾಗ್ದಾನ ನೆರವೇರಿಯೇ ತೀರುವುದು ಎಂಬ ದೃಢನಂಬಿಕೆಯೊಂದಿಗೆ ಈ ಪುಸ್ತಕ ಮುಕ್ತಾಯಗೊಳ್ಳುತ್ತದೆ.
ಈ ಆದಿಕಾಂಡ ಮೂರು ಪ್ರಾಮುಖ್ಯ ಸಂಪ್ರದಾಯ ಮೂಲಗಳಿಂದ ಬೆರೆತಿದೆ ಎಂದು ಪರಿಣಿತರ ಅಭಿಪ್ರಾಯ. ಇವುಗಳನ್ನು ಆಂಗ್ಲ ಭಾಷೆಯಲ್ಲಿ “ಯಾವಿಸ್ಟಿಕ್”, “ಎಲೊವಿಸ್ಟಿಕ್” ಮತ್ತು “ಪ್ರೀಸ್ಟ್‌ಲೀ” ಮೂಲಗಳೆಂದು ಕರೆಯುತ್ತಾರೆ.
ಪರಿವಿಡಿ
ಭೂಮ್ಯಾಕಾಶಗಳ ಹಾಗು ಮಾನವಕುಲದ ಸೃಷ್ಟಿ 1:1—2:25
ಪಾಪ ಮತ್ತು ಪರಿತಾಪದ ಆರಂಭ 3:1-24
ಆದಾಮನಿಂದ ನೋಹನವರೆಗೆ 4:1—5:32
ನೋಹ ಮತ್ತು ಪ್ರಳಯ 6:1—10:32
ಬಾಬೆಲ್ ಗೋಪುರ 11:1-9
ಶೇಮ್‌ನಿಂದ ಅಬ್ರಹಾಮನವರೆಗೆ 11:10-32
ಪಿತಾಮಹರಾದ ಅಬ್ರಹಾಮ, ಇಸಾಕ ಹಾಗು ಯಕೋಬ 12:1—35:28
ಏಸಾವನ ಸಂತತಿ36:1-42
ಜೋಸೆಫ್ ಮತ್ತು ಸಹೋದರರು 37:1—45:28
ಈಜಿಪ್ಟಿನಲ್ಲಿ ಇಸ್ರಯೇಲರು 46:1—50:26

הדגשה

שתף

העתק

None

רוצים לשמור את ההדגשות שלכם בכל המכשירים שלכם? הירשמו או היכנסו

YouVersion משתמש בקובצי Cookie כדי להתאים אישית את החוויה שלך. על ידי שימוש באתר שלנו, אתה מקבל את השימוש שלנו בעוגיות כמתואר ב מדיניות הפרטיות שלנו