ಇಬ್ರಿಯ 12:1-2

ಇಬ್ರಿಯ 12:1-2 ಕೊಡವ

ಆನಗುಂಡ್, ನಂಬಿಕೇರ ಮೂಲಕ ಬದ್‍ಕನಯಿಂಗಡ, ಮೋಡತ್‍ರನೆಕೆ ಉಳ್ಳ ಬಲ್ಯ ಗುಂಪ್‍ರ, ಇಚ್ಚಕ್ ಬಲ್ಯ ಸಾಕ್ಷಿ ನಂಗಡ ಸುತ್ತ್‌ಲ್ ಇಪ್ಪಕ, ನಂಗಳ ಮಿಂಞಕ್ ಪೋಪಕ್ ಕಯ್ಯತನೆಕೆ ನಂಗಡ ಮೇಲೆ ಉಳ್ಳ ಎಲ್ಲಾ ಬಾರತ್‍ನ ಪಿಂಞ ನಂಗಳ ಸುಲಬವಾಯಿತ್ ಚಿಕ್ಕಿಚಿಡುವ ಪಾಪತ್‍ನ ಚಾಡಿತ್ ಕಳೆಯಂಡು. ನಂಬಿಕೇನ ಸುರು ಮಾಡ್‌ವ ನಾಯಕನು ಅದ್‍ನ ಪೂರ್ತಿಮಾಡ್‍ವಂವೊನು ಆಯಿತುಳ್ಳ ಯೇಸುರ ಮೇಲೆ ಕಣ್ಣ್‌ಟ್ಟಿತ್, ನಂಗಕಾಯಿತ್ ಬೆಚ್ಚಿತುಳ್ಳ ಓಟತ್‍ನ ಪೊರುಮೇಲ್ ಓಡೋಣ. ಎನ್ನಂಗೆಣ್ಣ್‌ಚೇಂಗಿ ಯೇಸು, ತಾಂಡ ಮಿಂಞ ಬೆಚ್ಚಿತ್ಂಜ ಕುಶಿಕಾಯಿತ್, ಅವಮಾನತ್‍ನ ಗೇನ ಮಾಡತೆ, ಶಿಲುಬೇನ ಸಹಿಸಿಯಂಡ್ ದೇವಡ ಸಿಂಹಾಸನತ್‍ರ ಬಲ್‌ತೆ ಬರಿಲ್ ಅಳ್‌ತತ್.