ಗ್ರೇಸ್ ಇನ್ ಯುವರ್ ಸ್ಟೋರಿಮಾದರಿ

ನಮ್ಮ ಅವ್ಯವಸ್ಥೆಯಲ್ಲಿ ಕೃಪೆ
ಕೃಪೆ ಎಲ್ಲರಿಗೂ ಸಲ್ಲುತ್ತದೆ. ನೀವು ಎಲ್ಲಾ ನಿಯಮಗಳನ್ನು ಪಾಲಿಸುತ್ತಿರಲಿ ಅಥವಾ ನಿಮ್ಮ ತಪ್ಪುಗಳು ನಿಮ್ಮನ್ನು ಜೈಲಿಗೆ ಹಾಕಿರಲಿ. ನೀವು ಶಾಪಿಂಗ್ ವ್ಯಸನಿಯಾಗಿರಿ ಅಥವಾ ಮಾದಕ ದ್ರವ್ಯಗಳಿಗೆ ವ್ಯಸನಿಯಾಗಿರಿ. ನಿಮ್ಮ ಕುಟುಂಬ ನಿಮ್ಮನ್ನು ಪ್ರೀತಿಸುತ್ತಿರಲಿ ಅಥವಾ ನಿಮ್ಮ ಜೀವನದಲ್ಲಿ ಎಲ್ಲರೂ ನಿಮ್ಮನ್ನು ತೊರೆದಿರಲಿ.
ನೀವು ಅದಕ್ಕೆ ಅರ್ಹರಾಗಿದ್ದೀರಿ ಎಂದು ಭಾವಿಸುತ್ತೀರೋ ಅಥವಾ ನೀವು ಹಲವಾರು ಬಾರಿ ತಪ್ಪು ಮಾಡಿದ್ದೇನೆ ಎಂದು ಭಾವಿಸುತ್ತೀರೋ, ಏನೇ ಆದರೂ ಕೃಪೆ ನಿಮಗೆ ಸಲ್ಲುತ್ತದೆ.
ಕೃಪೆ ಪರಿಪಕ್ವವಾದವರಿಗಲ್ಲ , ಅದನ್ನು ಒಟ್ಟುಮಾಡಿ, ಸ್ವಚ್ಚಗೊಳಿಸಿ ಇಟ್ಟುರುವುದು ನಿಮಗಾಗಿ, ನಿಮಗೆ ನಾನು ಮತ್ತೆ ವಿಫಲನಾದೆ, ಯಾರೂ ನನ್ನನ್ನು ಪ್ರೀತಿಸಲಾರರು, ನಾನು ತುಂಬಾ ದೂರ ಹೋಗಿದ್ದೇನೆ, ಎಂದು ನಿಮಗನಿಸಿದರೆ, ಕೃಪೆ ನಿಮಗೆಂದೇ ಇದೆ.
ಜಾನ್ 8 ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಮಹಿಳೆಯ ಕಥೆ ಹೇಳುತ್ತದೆ. ಆ ಕಾಲದ ಧಾರ್ಮಿಕ ನಾಯಕರು ತನ್ನ ಪತಿಯಲ್ಲದ ವ್ಯಕ್ತಿಯೊಂದಿಗೆ ಮಲಗಿದ್ದ ಮಹಿಳೆಯನ್ನು ಕಂಡರು. ವ್ಯಭಿಚಾರಕ್ಕೆ ಮರಣದಂಡನೆ ವಿಧಿಸಬೇಕೆಂದು ಕಾನೂನು ಹೇಳಿತು.
ಯೇಸು ದೇಗುಲದ ಅಂಗಳಗಳಲ್ಲಿ ಬೋಧಿಸುತ್ತಿದ್ದಾಗ, ಈ ಧಾರ್ಮಿಕ ನಾಯಕರು ಆ ಮಹಿಳೆಯನ್ನು ಆತನ ಮುಂದೆ ತಂದರು. ಈ ಮಹಿಳೆ ಯೇಸುವಿನ ಮುಂದೆ ಬಿದ್ಧಾಗ ಆಕೆ ಅನುಭವಿಸಿದ ಅವಮಾನ, ಮುಜುಗರ ಮತ್ತು ಭಯವನ್ನು ನಾವು ಊಹಿಸಿಕೊಳ್ಳಬಹುದು. ಆಕೆಯ ಕಿವಿಯಲ್ಲಿ ಆರೋಪಗಳು ಮೊಳಗುತ್ತಿದ್ದವು. ಅವಳ ಸುತ್ತಲೂ ಖಂಡನೆ. ತಾನು ಏನು ಮಾಡಿದ್ದೇನೆಂಬುದು ಆಕೆಗೆ ಗೊತ್ತಿತ್ತು. ತಪ್ಪು ಮಾಡಿದ್ಧೇನೆ ಎಂದು ಅರಿವು ಅವಳಿಗಿತ್ತು.
ಜನರ ಸಮೂಹ ತಮ್ಮ ಕೈಗಳಲ್ಲಿ ಕಲ್ಲುಗಳನ್ನು ಹಿಡಿದುಕೊಂಡಿದ್ದರು, ಯೇಸುವಿನ ಬಾಯಿಯಿಂದ ಹೊರಹೊಮ್ಮಿದ ಮಾತುಗಳು ಅವರಿಗೆ ಆಘಾತವನ್ನುಂಟುಮಾಡಿದವುಃ "ನಿಮ್ಮಲ್ಲಿ ಪಾಪವನ್ನೇ ಮಾಡದವರು ಮೊದಲು ಅವಳ ಮೇಲೆ ಕಲ್ಲು ಎಸೆಯಿರಿ". (8:7). ಎಲ್ಲರೂ ಒಂದೊಂದಾಗಿ ತಮ್ಮ ಕಲ್ಲುಗಳನ್ನು ಕೆಳಗೆಸೆದು ಹೋದರು. ಯೇಸು ಮತ್ತು ಆ ಸ್ತ್ರೀ ಮಾತ್ರ ಉಳಿದರು.
ಅವನು ಅವಳ ಮೇಲೆ ಕೂಗಾಡಲಿಲ್ಲ, ಅವಳನ್ನು ಅಪಹಾಸ್ಯ ಮಾಡಲಿಲ್ಲ ಅಥವಾ ಅವಳನ್ನು ನಿರ್ಣಯಿಸಲಿಲ್ಲ. ಬದಲಾಗಿ, ಯೇಸು ಅವಳ ಅವ್ಯವಸ್ಥೆಗೆ, ಅವಳ ಗಾಯಗಳ ಬಗ್ಗೆ ಕಾಳಜಿ ವಹಿಸಿದನು. ತಾನು ಅವಳನ್ನು ಖಂಡಿಸುತ್ತಿಲ್ಲ, ಎಂದು ಅವಳಿಗೆ ಹೇಳಿದನು ಮತ್ತು ಬೇರೆ ಜೀವನ ನಡೆಸಲು ಅವಳನ್ನು ಆಹ್ವಾನಿಸಿದನು. (8:10-11).
ಯೇಸು ಈ ಮಹಿಳೆಗೆ ಅತ್ಯಂತ ಅಗತ್ಯವಾದ, ಆದರೆ ಕೊಂಚವೂ ನಿರೀಕ್ಷಿಸಿರದಿದ್ದ ಕೃಪೆಯೊಂದನ್ನು ಕೊಟ್ಟನು. ಅವಳ ಅವ್ಯವಸ್ಥೆಯೊಳಗೆ ಕಾಲಿಡಲು ಅವನು ಹೆದರಲಿಲ್ಲ. ಅವನು ಅವಳೊಂದಿಗೆ ಮಾತನಾಡುವ ಮೊದಲು ಅವಳಿಗೆ ಹೋಗಿ ತನ್ನನ್ನು ತಾನು ಸ್ವಚ್ಛಗೊಳಿಸಿಕೊಂಡು ಬರಲು ಹೇಳಲಿಲ್ಲ. ಅವನು ಅವಳು ಆ ಪರಿಸ್ಥಿತಿಯಲ್ಲಿದ್ದಾಗಲೇ ಅವಳ ಬಳಿಗೆ ಬಂದು ಅವಳಿಗೆ ಕೃಪೆ ನೀಡಿದನು.ಅದು ಅವಳ ಜೀವವನ್ನು ಉಳಿಸಿದ್ದು ಮಾತ್ರವಲ್ಲದೆ ಅದನ್ನು ಬದಲಾಯಿಸಿತು.
ಕೃಪೆಯೆನ್ನುವುದು ಅವ್ಯವಸ್ಥೆಗೆ, ಕೊಳಕಿಗೆ ಹೆದರುವುದಿಲ್ಲ. ನಮ್ಮ ಪಾಪಗಳು ಏನೇ ಇದ್ದರೂ ಯೇಸು ಆತನ ಬಳಿಗೆ ಬರಲು ನಮ್ಮನ್ನು ಆಹ್ವಾನಿಸುತ್ತಾನೆ. ಏಕೆಂದರೆ ಆತನ ಕೃಪೆ ನಮ್ಮನ್ನು ಶುದ್ಧೀಕರಿಸುತ್ತದೆ ಮತ್ತು ನಮ್ಮನ್ನು ಮನೆಗೆ ಕರೆದೊಯ್ಯುತ್ತದೆ.
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ನೀವು ಬಹುಶಃ "ಕೃಪೆ" ಎಂಬ ಪದವನ್ನು ಕೇಳಿದ್ದೀರಿ, ಆದರೆ ಅದರ ನಿಜವಾದ ಅರ್ಥವೇನು? ದೇವರ ಕೃಪೆ ನಮ್ಮ ಜೀವನವನ್ನು ಹೇಗೆ ರಕ್ಷಿಸಬಹುದು ಮತ್ತು ಪರಿವರ್ತಿಸಬಹುದು? ಈ ಅದ್ಭುತ ಕೃಪೆ ನಾವು ಇರುವ ಸ್ಥಳದಲ್ಲಿ ಹೇಗೆ ಸಂಧಿಸುತ್ತದೆ ಮತ್ತು ನಮ್ಮ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Pulse Evangelism ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://pulse.org
ವೈಶಿಷ್ಟ್ಯದ ಯೋಜನೆಗಳು

Awakening Faith: Hope From the Global Church

24 Days to Reflect on God's Heart for Redemption

God's Book: An Honest Look at the Bible's Toughest Topics

Game Changers: Devotions for Families Who Play Different (Age 8-12)

You Say You Believe, but Do You Obey?

Sharing Your Faith in the Workplace

Protocols, Postures and Power of Thanksgiving

Legacy Lessons W/Vance K. Jackson

30 Powerful Prayers for Your Child Every Day This School Year
