ಕ್ರಿಸ್ತನನ್ನು ಅನುಸರಿಸಲುಮಾದರಿ

ಕ್ರಿಸ್ತನನ್ನು  ಅನುಸರಿಸಲು

12 ನ 12 ದಿನ

ಕ್ರಿಸ್ತನನ್ನು ಹಿಂಬಾಲಿಸುವುದರ ಫಲಿತಾಂಶ

ಯೇಸುವನ್ನು ಹಿಂಬಾಲಿಸಿದವರಿಗೆ ಆತನು ಮಾಡಿದ ಎಲ್ಲಾವುದರ ನೋಟ ದೊರೆಯಿತು. ಅವರು ಆತನ ಅದ್ಭುತಗಳನ್ನು ನೋಡಿದರು, ಸತ್ತವರನ್ನು ಎಬ್ಬಿಸುವುದನ್ನು ನೋಡಿದರು, ಆತನಿಗಾದ ಬೇಷರತ್ತಾದ ತಿರಸ್ಕಾರ, ಬಹಿಷ್ಕಾರ ಮತ್ತು ಸ್ವೀಕಾರವನ್ನು ನೋಡಿದರು. ಅವರು ಗುಣಿಸಿದ ರೊಟ್ಟಿಯನ್ನು ಹೊಟ್ಟೆ ತುಂಬಾ ತಿಂದರು. ಅವರು ಬಿರುಗಾಳಿಯಿಂದ ಕೂಡಿದ ಸಮುದ್ರದ ಶಾಂತತೆಯನ್ನು ಆನಂದಿಸಿದರು, ಅವರು ಎಂದಿಗೂ ಮೇಜಿನ ಬಳಿ ಕುಳಿತದವರೊಂದಿಗೆ ಭೇಟಿ ಮಾಡಿದರು!

ನೀವು ಮತ್ತು ನಾನು ಯೇಸುವನ್ನು ನಿಜವಾಗಿಯೂ ಹಿಂಬಾಲಿಸಲು ಪ್ರಾರಂಭಿಸುವಾಗ, ನಾವು ಸಹ ಈ ರೀತಿಯಾದ ಅನುಭವಗಳನ್ನು ಹೊಂದಲು ಅನುಭವಿಸುತ್ತೇವೆ. ಆತನನ್ನು ನಂಬುವ ನಾವು ಆತನಿಗಿಂದ ದೊಡ್ಡ ಕ್ರಿಯೆಗಳನ್ನು ಮಾಡುತ್ತೇವೆಂದು ಯೇಸುವೇ ಹೇಳಿರುವನು. ಅದು ಅದ್ಭುತವಲ್ಲವೇ?

ಪ್ರಶ್ನೆಯೆನೆಂದರೆ ನಿಮ್ಮಲ್ಲಿ ಪ್ರತಿಯೊಬ್ಬರೂ ಯೇಸುವನ್ನು ನಿಕಟವಾಗಿ ಹಿಂಬಾಲಿಸಲು ಆರಿಸಿಕೊಂಡಿರುವಿರಾ? ಪ್ರತಿದಿನ ನಾನು ನನ್ನ ಶಿಲುಬೆಯನ್ನು ಹೊತ್ತುಕೊಂಡು, ನನ್ನನ್ನು ನಿರಾಕರಿಸಿ, ಪೂರ್ಣ ಹೃದಯದಿಂದ, ಮನಿಸ್ಸಿನಿಂದ ಮತ್ತು ಶಕ್ತಿಯಿಂದ ಆತನನ್ನು ಹಿಂಬಾಲಿಸಲು ಸಿದ್ಧನಿದ್ದೇನೆಯೇ?

ನೀವು ಹಗುರವಾಗಿ ತೆಗೆದುಕೊಳ್ಳುವಂತ ಪ್ರಶ್ನೆ ಇದಾಗಿರುವುದಿಲ್ಲ. ನೀವು ಪಾವತಿಸಬೇಕಾದ ಬೆಲೆಯನ್ನು ನೀವು ಪರಿಗಣಿಸಬೇಕು ಆದರೆ ಅಂತಹ ಶರಣಾಗತ ಜೀವನಕ್ಕಾಗಿ ಕಾಯುತ್ತಿರುವ ಅಸಂಖ್ಯಾತ ಪ್ರತಿಫಲಗಳನ್ನು ಪರಿಗಣಿಸಬೇಕು. ನೀವು ಯೇಸುವಿನೊಂದಿಗೆ ಅಂತಹ ಸಾಮಿಪ್ಯದಲ್ಲಿ ನಡೆಯಲು ಆರಿಸಿಕೊಂಡಾಗ, ಶಿಷ್ಯರು ಈ ಲೋಕದಲ್ಲಿ ಯೇಸುವನ್ನು ಹಿಂಬಾಲಿಸಿದಾಗ ಅನುಭವಿಸಿದ ವಿಷಯಗಳನ್ನು ನೀವು ಅನುಭವಿಸಲು ಪ್ರಾರಂಭಿಸುವಿರಿ. ಅಷ್ಟೆ ಅಲ್ಲ, ನೀವು ಆತನನ್ನು ನೋಡದೆ ನಂಬಿದ ಕಾರಣ ನಿಮಗೆ ಪ್ರತಿಫಲ ಹೆಚ್ಚಿನದಾಗಿರುವುದು.ಅಷ್ಟೇ ಅಲ್ಲದೆ, ಒಳನೋಟ ಮತ್ತು ಶಕ್ತಿಯೊಂದಿಗೆ ಜೀವಿಸಲು ನಮಗೆ ಸಹಾಯ ಮಾಡುವ ಪವಿತ್ರಾತ್ಮನ ಉಡುಗೊರೆಯು ಸಹ ಒಳಗೊಂಡಿರುತ್ತದೆ. ಇದರಿಂದ ನಾವು ಮಾತ್ರ ರೂಪಾಂತರಗೊಳ್ಳದೆ ನಮ್ಮ ಸುತ್ತಲಿನ ಲೋಕಕ್ಕೂ ಸಹ ನಾವು ರೂಪಾಂತರವನ್ನು ತರುತ್ತೇವೆ!

ಘೋಷಣೆ:ಈ ಲೋಕದಲ್ಲಿ ದೇವರ ರಾಜ್ಯವನ್ನು ನೋಡಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಕ್ರಿಸ್ತನನ್ನು  ಅನುಸರಿಸಲು

ಪ್ರತಿದಿನ ಯೇಸುವನ್ನು ಹೇಗೆ ಅನುಸರಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಸತ್ಯವೇದದ ಈ ಯೋಜನೆಯು ನಿಮಗೆ ಸೂಕ್ತವಾಗಿರುತ್ತದೆ. ಸಹಜವಾಗಿ ಯೇಸುವಗೆ ಒಪ್ಪಿಗೆ ಎಂದು ಹೇಳುವುದೇಈ ಪಠ್ಯಕ್ರಮದ ಮೊದಲನೆಯ ಹೆಜ್ಜೆಯಾಗಿರುತ್ತದೆ. ಜೀವಮಾನದಾದ್ಯಂತ ಪದೇ ಪದೇ ಒಪ್ಪಿಗೆ ಒಪ್ಪಿಗೆ ಎಂದು ಹೇಳಿ ಆತನೊಂದಿಗೆ ಹೆಜ್ಜೆ ಹಾಕುವ ಪ್ರಯಾಣವು ಇದನ್ನು ಹಿಂಬಾಲಿಸುವ ಹೆಜ್ಜೆಗಳಾಗಿವೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು We Are Zion ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://www.instagram.com/wearezion.in/