ವೆಚ್ಚಮಾದರಿ

ವೆಚ್ಚ

3 ನ 1 ದಿನ

ಭಾರತದಲ್ಲಿರುವ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವುದು

ಸತ್ಯವೇದ ಯೋಜನೆಯ ದಿನ 1ಕ್ಕೆ ಸ್ವಾಗತ. ನಾವು ವೆಚ್ಚ ಲೆಕ್ಕಿಸುವದನ್ನು ಕುರಿತು ಮಾತನಾಡುವದಕ್ಕೆ ಮೊದಲು,

ಭಾರತದಲ್ಲಿರುವ ಪ್ರಮುಖ ಅಗತ್ಯತೆಗಳನ್ನು ಪರಿಹರಿಸುವ ಕಡೆಗೆ ಗಮನಹರಿಸೋಣ.

ಈ ಅಗತ್ಯತೆಗಳನ್ನು ಎತ್ತಿ ತೋರಿಸುವ ಹಾಗೂ ಬದಲಾವಣೆಗಾಗಿ ತುರ್ತುಸ್ಥಿತಿಯನ್ನು ಅವಲೋಕಿಸಿ

ಅಂಕಿಅಂಶಗಳನ್ನು ಪರಿಶೀಲಿಸೋಣ.

ಪ್ರಮುಖ ಅಂಕಿಅಂಶಗಳು:

1. ಭಾರತದಲ್ಲಿರುವ 90% ಹಳ್ಳಿಗಳು ಸಭೆಗಳನ್ನು ಹೊಂದಿಲ್ಲ: ಗ್ರಾಮೀಣ ಪ್ರದೇಶಗಳಲ್ಲಿ ಕ್ರೈಸ್ತ ಉಪಸ್ಥಿತಿಯ

ಗಮನಾರ್ಹ ಕೊರತೆ ಮತ್ತು ಇದು ಸುವಾರ್ತೆಯನ್ನು ಸಾರಲು ಹೊಂದಿರುವ ಪರಿಣಾಮಗಳನ್ನು ಪರಿಗಣಿಸಿ.

2. 2,279 ಭಾರತದಲ್ಲಿರುವ ಜನರ ಗುಂಪುಗಳು ಸುವಾರ್ತೆಯನ್ನು ಕೇಳಿಲ್ಲ: ಜೋಶುವಾ ಪ್ರಾಜೆಕ್ಟ್ ಪ್ರಕಾರ,

ಭಾರತದಲ್ಲಿ ಗಣನೀಯ ಸಂಖ್ಯೆಯ ಜನರು ತಲುಪದೆ ಉಳಿದಿದ್ದಾರೆ ಮತ್ತು ರಕ್ಷಣೆಯ ಸಂದೇಶವನ್ನು ಕೇಳಲು

ಅವಕಾಶವನ್ನು ಹೊಂದಿಲ್ಲ. ಸುವಾರ್ತೆಯನ್ನು ಕೇಳದೆ ಸಂಧಿಸಲಾಗದ ಲೋಕದಲ್ಲಿ ಪ್ರತಿದಿನ ಸುಮಾರು 70,000

ಜನರು ಸಾಯುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಗಂಭೀರದ ಸಂಗತಿಯಾಗಿದೆ.

3. ಮಿತವಾದ ಸತ್ಯವೇದ ಭಾಷಾಂತರ: ಭಾರತದಲ್ಲಿ 1,600 ಮಾತೃಭಾಷೆಗಳು ಮತ್ತು 700 ಉಪಭಾಷೆಗಳಿರುವ

ವ್ಯಾಪಕವಾದ ಭಾಷಾ ವೈವಿಧ್ಯತೆಯ ಹೊರತಾಗಿಯೂ, ಕೇವಲ 52 ಭಾಷೆಗಳು ಸಂಪೂರ್ಣ ಸತ್ಯವೇದ

ಭಾಷಾಂತರವನ್ನು ಹೊಂದಿವೆ. ಜನರೊಂದಿಗೆ ಅವರ ಸ್ವಂತ ಭಾಷೆಗಳಲ್ಲಿ ಸತ್ಯವೇದವನ್ನು ಪರಿಣಾಮಕಾರಿಯಾಗಿ

ಹಂಚಿಕೊಳ್ಳಲು ಇದು ಒಡ್ಡುವ ಸವಾಲನ್ನು ಅವಲೋಕಿಸಿ.

4. ಪ್ರಪಂಚದ ಮೂರನೇ ಒಂದು ಭಾಗದಷ್ಟು ಸಂಧಿಸದ ಜನರ ಗುಂಪುಗಳನ್ನು ಭಾರತ ಹೊಂದಿದೆ:

ಭಾರತದೊಳಗೆ ಸಂಧಿಸದ ಜನರ ಗುಂಪುಗಳ ಅಪಾರ ಸಂಖ್ಯೆಯ ಬಗ್ಗೆ ಮತ್ತು ಸುವಾರ್ತೆಯಿಂದ ಅವರನ್ನು

ತಲುಪುವ ಮಹತ್ವವನ್ನು ಆಲೋಚಿಸಿ.

5. ಯೇಸುವಿನ ಎರಡನೇ ಬರೋಣ – ಮತ್ತಾಯ 24:14 ರಲ್ಲಿರುವ ವಚನವನ್ನು ಧ್ಯಾನಮಾಡಿ, ಇದು ಕ್ರಿಸ್ತನ

ಬರೋಣಕ್ಕೆ ಪೂರ್ವಾಪೇಕ್ಷಿತವಾಗಿ ಸುವಾರ್ತೆಯ ಜಾಗತಿಕ ಘೋಷಣೆಯನ್ನು ಎತ್ತಿ ತೋರಿಸುತ್ತದೆ. ಈ

ಪ್ರವಾದನೆಯನ್ನು ನೆರವೇರಿಸುವಲ್ಲಿ ನಾವು ವಹಿಸುವ ಪಾತ್ರವನ್ನು ಮತ್ತು ಸಂಧಿಸದವರನ್ನು ಸಂಧಿಸುವ

ಅವಸರವನ್ನು ಪರಿಗಣಿಸಿ.

ಬದಲಾವಣೆ ಮತ್ತು ವೆಚ್ಚ:

ಲೋಕವನ್ನು ಸಂಧಿಸಲು ವೆಚ್ಚವಾಗುತ್ತದೆ; ಮತ್ತು ಬದಲಾವಣೆಯು ನಾವು ಒಪ್ಪಿಕೊಳ್ಳಬೇಕಾದ ವೆಚ್ಚವಾಗಿದೆ.

ಈ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಬದಲಾವಣೆ ಅಗತ್ಯ.

ಇದಕ್ಕೆ ಆದ್ಯತೆಗಳು, ಸಂಪನ್ಮೂಲಗಳು ಮತ್ತು ವೈಯಕ್ತಿಕ ಸಮರ್ಪಣೆಯಲ್ಲಿ ಬದಲಾವಣೆಯ ಅಗತ್ಯವಿದೆ.

ಯೇಸುವಿನ ಹಿಂಬಾಲಕರಾಗಿ, ನಾವು ಬದಲಾವಣೆಯ ಮಧ್ಯವರ್ತಿಗಳಾಗಿರಲು ಮತ್ತು ಮಹಾಆಜ್ಞೆಯನ್ನು

ನೆರವೇರಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಲು ಕರೆಯಲ್ಪಟ್ಟಿದ್ದೇವೆ.

ಇದು ಸಂಪನ್ಮೂಲಗಳನ್ನು ಮರುನಿರ್ದೇಶಿಸುವುದು, ಸೇವೆಯ ವಿಧಾನಗಳನ್ನು ಮರುಮೌಲ್ಯಮಾಪನ

ಮಾಡುವುದು, ನಮ್ಮ ಜೀವನಶೈಲಿಯನ್ನು ಮರುವಿನ್ಯಾಸಗೊಳಿಸುವುದು ಮತ್ತು ಸುವಾರ್ತೆಯನ್ನು

ಹಂಚಿಕೊಳ್ಳುವಲ್ಲಿ ನಮ್ಮ ಸಮರ್ಪಣೆ ಒಳಗೊಂಡಿರುತ್ತದೆ.

ಬದಲಾವಣೆಯನ್ನು ಸುಗಮಗೊಳಿಸುವಲ್ಲಿ ಮತ್ತು ಭಾರತದಲ್ಲಿ ಸಂಧಿಸದವರನ್ನು ಸಂಧಿಸುವಲ್ಲಿ ನಮ್ಮ ಪಾತ್ರವನ್ನು

ನಾವು ಅವಲೋಕನ ಮಾಡಿಕೊಳ್ಳೋಣ.

ಪ್ರಾರ್ಥನೆ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ಈ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ನಮಗೆ

ಸಹಾಯ ಮಾಡಲು ಮತ್ತು ಸರಿಯಾದ ಕ್ರಮವನ್ನು ತೆಗೆದುಕೊಳ್ಳಲು ನಮಗೆ ಮಾರ್ಗದರ್ಶನ ಕೊಡುವುದಕ್ಕಾಗಿ

ದೇವರನ್ನು ಕೇಳಿಕೊಳ್ಳಿರಿ.

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ವೆಚ್ಚ

ಭಾರತದಲ್ಲಿ ಸಂಧಿಸದವರನ್ನು ಸಂಧಿಸಲು ಕೇಂದ್ರೀಕರಿಸಿರುವ ಈ ಸತ್ಯವೇದದ ಯೋಜನೆಗೆ ಸ್ವಾಗತ. ಭಾರತದಲ್ಲಿರುವ ಪ್ರಮುಖ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ವೇದಿಕೆಯನ್ನು ಸಿದ್ದಪಡಿಸುತ್ತೇವೆ, ನಂತರ ನಾವು ವೆಚ್ಚದೊಂದಿಗೆ ಬರುವ ಹಂತಗಳನ್ನು ಅನ್ವೇಷಿಸುತ್ತೇವೆ ಮತ್ತು ಅಂತಿಮವಾಗಿ ನಾವು ಅಂತಿಮ ವೆಚ್ಚ – ಅಂದರೆ ದೇವರು ನಮಗಾಗಿ ತನ್ನ ಪ್ರಾಣವನ್ನು ಕೊಡುವ ಮೂಲಕ ಮಾಡಿದ ಬಲಿದಾನ ಬಗ್ಗೆ ಮಾತನಾಡುತ್ತೇವೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Zero ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.zerocon.in/