BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣಮಾದರಿ

BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ

40 ನ 30 ದಿನ

ಪಾಲ್ ಮತ್ತು ಬರ್ನಬನನ್ನು ಆಂಟಿಯೋಕ್ಯದಿಂದ ಹೊರಹಾಕಲಾದ ನಂತರ, ಅವರು ಯೇಸುವಿನ ರಾಜ್ಯದ ಬಗ್ಗೆ ಒಳ್ಳೆಯ ಸುದ್ದಿಯೊಂದಿಗೆ ಇಕೋನಿಯಮ್ ನಗರಕ್ಕೆ ಪ್ರಯಾಣಿಸುತ್ತಾರೆ. ಕೆಲವರು ಅವರ ಸಂದೇಶವನ್ನು ನಂಬುತ್ತಾರೆ, ಆದರೆ ಅದನ್ನು ತಿರಸ್ಕರಿಸುವವರು ಅವರ ವಿರುದ್ಧ ತೊಂದರೆ ಉಂಟುಮಾಡುತ್ತಾರೆ.  ಇಡೀ ನಗರವು ಈ ವಿಷಯದ ಬಗ್ಗೆ ವಿಭಜಿಸುವಷ್ಟು ಪರಿಸ್ಥಿತಿ ಬಿಸಿಯಾಗುತ್ತದೆ. ಮತ್ತು ಶಿಷ್ಯರು ತಮ್ಮ ವಿರುದ್ಧದ ಮಾರಣಾಂತಿಕ ಬೆದರಿಕೆಗಳ ಬಗ್ಗೆ ತಿಳಿದಾಗ, ಅವರು ಲೈಕೋನಿಯಾ, ಲಿಸ್ಟ್ರಾ, ಡರ್ಬೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗುತ್ತಾರೆ. 


ಲಿಸ್ಟ್ರಾದಲ್ಲಿದ್ದಾಗ, ಪೌಲನು ಹಿಂದೆಂದೂ ನಡೆಯದ ಒಬ್ಬ ವ್ಯಕ್ತಿಯನ್ನು ಭೇಟಿಯಾಗುತ್ತಾನೆ. ಯೇಸುವಿನ ಶಕ್ತಿಯಿಂದ ಪೌಲನು ಅವನನ್ನು ಗುಣಪಡಿಸಿದಾಗ, ಜನರು ತಮನ್ನು ಭೇಟಿ ಮಾಡಲು ಇಳಿದು ಬಂದ ಗ್ರೀಕ್ ದೇವರು ಎಂದು ತಪ್ಪಾಗಿ ಭಾವಿಸಿ ಅವರು ಆತನನ್ನು ಆರಾಧಿಸಲು ಪ್ರಯತ್ನಿಸುತ್ತಾರೆ. ಪೌಲನು ಮತ್ತು ಬರ್ನಬಸ್ ಜನರನ್ನು ಸರಿಪಡಿಸಲು ಧಾವಿಸುತ್ತಾರೆ, ಒಬ್ಬನೇ ನಿಜವಾದ ದೇವರು ಇದ್ದಾನೆ ಮತ್ತು ಅವರು ಅವನ ಸೇವಕರು ಎಂದು ಒತ್ತಾಯಿಸಿದರು. ಆದರೆ ಜನರು ಅದನ್ನು ಅರ್ಥಮಾಡಿಕೊಳ್ಳದೇ, ಪೌಲನಿಗೆ ಮರಣದಂಡನೆ ನೀಡಬೇಕೆಂದು ಪೌಲ ಮತ್ತು ಬರ್ನಾಬಾಸನ ಶತ್ರುಗಳಿಂದ ಬೇಗನೆ ಮನವರಿಕೆಯಾಗುತ್ತಾರೆ. ಪೌಲನು ಪ್ರಜ್ಞಾಹೀನನಾಗುವವರೆಗೂ ಅವರು ಕಲ್ಲುಗಳನ್ನು ಎಸೆಯುತ್ತಾರೆ. ಅವನು ಸತ್ತಿದ್ದಾನೆಂದು ಭಾವಿಸಿ ಅವನ ದೇಹವನ್ನು ಲಿಸ್ಟ್ರಾದಿಂದ ಹೊರಗೆ ಎಳೆಯುತ್ತಾರೆ. ಪೌಲನು ಎದ್ದು ನಿಂತು ನಗರದೊಳಗೆ ನಡೆದು ಹೋದಾಗ ಆತನ ಸ್ನೇಹಿತರು ಆಶ್ಚರ್ಯಚಕಿತರಾಗಿ ಸುತ್ತು ನಿಂತಿರುತ್ತಾರೆ. ಮರುದಿನ ಪೌಲನು ಮತ್ತು ಬರ್ನಾಬಾಸನು ಸುವಾರ್ತೆಯನ್ನು ಸಾರುವುದಕ್ಕಾಗಿ ಡರ್ಬೆಗೆ ಭೇಟಿ ನೀಡುತ್ತಾರೆ ಮತ್ತು ನಂತರ, ಪ್ರತಿ ಹೊಸ ದೇವಾಲಯಕ್ಕೆ ಹೆಚ್ಚಿನ ನಾಯಕರನ್ನು ನೇಮಿಸಲು ಮತ್ತು ಕ್ರೈಸ್ತರನ್ನು ಕಷ್ಟದೆಸೆಯಲ್ಲಿ ಸತತವಾಗಿ ಪ್ರಯತ್ನಿಸುವಂತೆ ಪ್ರೋತ್ಸಾಹಿಸಲು ಲಿಸ್ಟ್ರಾ ಮತ್ತು ಸುತ್ತಮುತ್ತಲಿನ ನಗರಗಳಿಗೆ ಹಿಂತಿರುಗುತ್ತಾರೆ. 


ದೇವರ ವಾಕ್ಯ

ಈ ಯೋಜನೆಯ ಬಗ್ಗೆ

BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ

ಲ್ಯೂಕ್ ಮತ್ತು ಆ್ಯಕ್ಟ್ಸ್ ಮೂಲಕ ಪ್ರಯಾಣ, ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಲ್ಯೂಕ್ ಮತ್ತು ಆ್ಯಕ್ಟ್ಸ್ ಪುಸ್ತಕಗಳನ್ನು 40 ದಿನಗಳಲ್ಲಿ ಓದಲು ಪ್ರೇರೇಪಿಸುತ್ತದೆ. ಭಾಗವಹಿಸುವವರು ಯೇಸುವನ್ನು ಎದುರಿಸಲು ಮತ್ತು ಲ್ಯೂಕ್ ಅವರ ಅದ್ಭುತ ಸಾಹಿತ್ಯ ವಿನ್ಯಾಸ ಹಾಗೂ ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳಲು ಈ ಯೋಜನೆ ಅನಿಮೇಟೆಡ್ ವಿಡಿಯೋ ಮತ್ತು ಒಳನೋಟವುಳ್ಳ ಸಾರಾಂಶವನ್ನು ಒಳಗೊಂಡಿದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು BibleProject ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://bibleproject.com