BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣಮಾದರಿ

BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ

40 ನ 2 ದಿನ

ಮರಿಯಳು ತನ್ನ ಗರ್ಭಧಾರಣೆಯ ಅಂತ್ಯದ ಸಮೀಪದಲ್ಲಿರುವಾಗ, ಸೀಸರ್ ಅಗಸ್ಟಸ್ ಆದೇಶಿಸಿದ ಜನಗಣತಿಗೆ ನೋಂದಾಯಿಸಲು ಆಕೆ ಮತ್ತು ಅವಳ ನಿಶ್ಚಿತ ವರ ಜೋಸೆಫ್ ಬೇತ್ಲೆಹೇಮಿಗೆ ಪ್ರಯಾಣಿಸಬೇಕಾಗುತ್ತದೆ. ಅವರು ಅಲಿಗೆ ತಲುಪಿದಂತೆಯೇ ಮರಿಯಳಿಗೆ ಹೆರಿಗೆ ನೋವು ಪ್ರಾರಂಭವಾಯಿತು. ಅವರಿಗೆ ಅತಿಥಿ ಕೊಠಡಿ ಯಾವುದೂ ಕಂಡುಬರಲಿಲ್ಲಿ , ಮತ್ತು ಪ್ರಾಣಿಗಳು ಮಲಗುವ ಸ್ಥಳ ಒಂದೇ ಅವರಿಗೆ ದೊರಕಿತು. ಮರಿಯಳು ಜನ್ಮ ನೀಡಿ ಇಸ್ರೇಲ್‌ನ ಭವಿಷ್ಯದ ರಾಜನನ್ನು ಪ್ರಾಣಿಗಳ ಆಹಾರ ತೊಟ್ಟಿಯಲ್ಲಿ ಇಡುತ್ತಾಳೆ. 


ಅಲ್ಲಿಂದ ಸಮೀಪದಲ್ಲೇ ಕುರುಬರ ಗುಂಪೊಂದು ಅವರ ಹಿಂದುಗಳನ್ನು ಸಾಕುತ್ತಿದ್ದಾಗ ಅಂದು ಅದ್ಭುತವಾದ ದೇವದೂತನು ಅವರ ಮುಂದೆ ಕಾಣಿಸಿಕೊಳ್ಳುತ್ತಾನೆ. ಇದು ಖಂಡಿತವಾಗಿಯೂ ಅವರನ್ನು ಹೆದರಿಸಿತು. ಆದರೆ ಒಬ್ಬ ರಕ್ಷಕನು ಹುಟ್ಟಿರುವುದರಿಂದ ದೇವದೂತನು ಅವರನ್ನು ಕೊಂಡಾಡಲು ಹೇಳಿದನು. ಬಟ್ಟೆಯಲ್ಲಿ ಸುತ್ತಿ ಆಹಾರದ ತೊಟ್ಟಿಯಲ್ಲಿ ಮಲಗಿರುವ ಮಗು ಒಂದನ್ನು ಅವರು ಕಂಡುಕೊಳ್ಳುತ್ತಾರೆ ಎಂದು ಅವರಿಗೆ ಹೇಳಲಾಯಿತು. ತನ್ನ ಶಾಂತಿಯನ್ನು ಭೂಮಿಗೆ ತಂದ ದೇವರನ್ನು ಸ್ತುತಿಸುವ ಹಾಡಿನೊಂದಿಗೆ ದೇವತೆಗಳ ದೊಡ್ಡ ಗಾಯನವು ಆಚರಣೆಯನ್ನು ಪ್ರಾರಂಭಿಸುತ್ತದೆ. ಕುರುಬರು ಒಂದು ನಿಮಿಷವನ್ನೂ ಸಹ ಕಳೆಯದೆ ಮಗುವನ್ನು ಹುಡುಕಲು ಪ್ರಾರಂಭಿಸಿದರು. ದೇವದೂತನು ಹೇಳಿದಂತೆಯೇ ಅವರು ನವಜಾತ ಯೇಸುವನ್ನು ಗೋದಲಿಯಲ್ಲಿ ಕಂಡುಕೊಂಡರು. ಅವರು ಅತ್ಯಾಶ್ಚರ್ಯಕ್ಕೆ ಒಳಗಾದರು. ಅವರು ಅನುಭವಿಸಿದ್ದನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲ, ಮತ್ತು ಅವರ ವರದಿಯನ್ನು ಕೇಳುವ ಪ್ರತಿಯೊಬ್ಬರೂ ಮೈಮರೆಯುತ್ತಾರೆ. 


ಒಬ್ಬ ಹದಿಹರೆಯದ ಹುಡುಗಿಗೆ ಒಂದು ಪ್ರಾಣಿಯಗಾಲ ಆಶ್ರಯದಲ್ಲಿ ಹುಟ್ಟಿ ಹೆಸರಾರಿಯಾದ ಗುರುಬರಿಂದ ಕೊಂಡಾಡಲಾಗಿ - ದೇವರು ಹೀಗೆ ಆಗಮಿಸುತ್ತಾರೆ ಎಂದು ಯಾರೂ ನಿರೀಕ್ಷಿಸುವುದಿಲ್ಲ. ವಿಷಯವೇನೆಂದರೆ ಲೂಕನ ಕಥೆಯಲ್ಲಿ ಎಲ್ಲವೂ ಹಿಂದಕ್ಕೆ ಇದೆ. ಈ ಕೊಳಕು ಸ್ಥಳಗಳಲ್ಲಿ ದೇವರ ರಾಜ್ಯವು ಹೇಗೆ ಬರುತ್ತದೆ ಎಂಬುದನ್ನು ಅವರು ತೋರಿಸುತ್ತಿದ್ದಾರೆ -- ಕಾಯುವವರು, ವಿಧವೆಯರು ಮತ್ತು ಬಡವರ ನಡುವೆ - ಏಕೆಂದರೆ ಯೇಸು ಬಂದದ್ದು ನಮ್ಮ ವಿಶ್ವ ಕ್ರಮವನ್ನು ತಲೆಕೆಳಗಾಗಿ ತಿರುಗಿಸುವ ಮೂಲಕ ಮೋಕ್ಷವನ್ನು ತರಲು. 


ದೇವರ ವಾಕ್ಯ

ಈ ಯೋಜನೆಯ ಬಗ್ಗೆ

BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ

ಲ್ಯೂಕ್ ಮತ್ತು ಆ್ಯಕ್ಟ್ಸ್ ಮೂಲಕ ಪ್ರಯಾಣ, ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಲ್ಯೂಕ್ ಮತ್ತು ಆ್ಯಕ್ಟ್ಸ್ ಪುಸ್ತಕಗಳನ್ನು 40 ದಿನಗಳಲ್ಲಿ ಓದಲು ಪ್ರೇರೇಪಿಸುತ್ತದೆ. ಭಾಗವಹಿಸುವವರು ಯೇಸುವನ್ನು ಎದುರಿಸಲು ಮತ್ತು ಲ್ಯೂಕ್ ಅವರ ಅದ್ಭುತ ಸಾಹಿತ್ಯ ವಿನ್ಯಾಸ ಹಾಗೂ ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳಲು ಈ ಯೋಜನೆ ಅನಿಮೇಟೆಡ್ ವಿಡಿಯೋ ಮತ್ತು ಒಳನೋಟವುಳ್ಳ ಸಾರಾಂಶವನ್ನು ಒಳಗೊಂಡಿದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು BibleProject ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://bibleproject.com