BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣಮಾದರಿ

ಮುಂಬರುವ ಪಸ್ಕ ಹಬ್ಬಕ್ಕಾಗಿ ಯೇಸು ಜೆರೂಸಲೇಮಿನಲ್ಲಿ ಕಾಯುತ್ತಿದ್ದಂತೆ, ದೇವರ ರಾಜ್ಯದ ಸ್ವರೂಪ ಮತ್ತು ಮುಂಬರುವ ವಿಷಯಗಳ ಬಗ್ಗೆ ದೇವಾಲಯದಲ್ಲಿ ಪ್ರತಿದಿನ ಕಲಿಸುತ್ತಾರೆ. ಒಂದು ಸಮಯದಲ್ಲಿ, ಯೇಸು ಮೇಲಕ್ಕೆತ್ತಿ ನೋಡಿದಾಗ ಅನೇಕ ಶ್ರೀಮಂತರು ದೇವಾಲಯದ ಖಜಾನೆಯಲ್ಲಿ ದೊಡ್ಡ ಉಡುಗೊರೆಗಳನ್ನು ದಾನ ಮಾಡುವುದನ್ನೂ ಬಡ ವಿಧವೆ ಒಂದೆರಡು ನಾಣ್ಯಗಳನ್ನು ಮಾತ್ರ ದಾನ ಮಾಡುವುದನ್ನು ಕಾಣುತ್ತಾರೆ. ಶ್ರೀಮಂತರು ತಮಗೆ ಅಗತ್ಯವಿಲ್ಲದದ್ದನ್ನು ನೀಡಿದರು ಆದರೆ ವಿಧವೆ ತನ್ನ ಬಳಿಯಿದ್ದನ್ನೆಲ್ಲ ಕೊಟ್ಟಳು ಎಂದು ಯೇಸುವಿಗೆ ತಿಳಿದಿದೆ. ಆದ್ದರಿಂದ ಅವರು ಕೇಳುವ ಎಲ್ಲರಿಗೂ ಹೀಗೆಂದು ಹೇಳುತ್ತಾರೆ, ""ಈ ಬಡ ವಿಧವೆ ಉಳಿದ ಎಲ್ಲರಿಗಿಂತ ಹೆಚ್ಚಿನದನ್ನು ಕೊಟ್ಟಳು.""
ನೋಡಿ, ಯೇಸು ಇತರ ರಾಜರಂತೆ ಶ್ರೀಮಂತರನ್ನು ದೊಡ್ಡ ದೇಣಿಗಳಿಗಾಗಿ ಗೌರವಿಸುವವರಲ್ಲ. ಅವನ ರಾಜ್ಯದಲ್ಲಿ, ಹೆಚ್ಚಿನದನ್ನು ನೀಡಲು ಜನರಿಗೆ ಹೆಚ್ಚು ಅಗತ್ಯವಿಲ್ಲ. ಈ ಪ್ರಪಂಚದ ಸಂಪತ್ತು ಕೊನೆಗೊಳ್ಳುತ್ತಿದೆ ಮತ್ತು ಅವನ ರಾಜ್ಯವು ಹತ್ತಿರವಾಗುತ್ತಿದೆ ಎಂದು ಯೇಸು ಕಲಿಸುತ್ತಾರೆ, ಆದ್ದರಿಂದ ತನ್ನ ಅನುಯಾಯಿಗಳಿಗೆ ತಮ್ಮ ಹೃದಯಗಳನ್ನು ವ್ಯರ್ಥ ಮತ್ತು ಚಿಂತೆಗಳಿಂದ ಮುಕ್ತವಾಗಿಡಲು ಬದಲಾಗಿ ಅವರ ಮೇಲೆ ಅವಲಂಬಿತವಾಗಿರಲು ಹೇಳುತ್ತಾರೆ . 21:13-19, 34-36).
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ಲ್ಯೂಕ್ ಮತ್ತು ಆ್ಯಕ್ಟ್ಸ್ ಮೂಲಕ ಪ್ರಯಾಣ, ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಲ್ಯೂಕ್ ಮತ್ತು ಆ್ಯಕ್ಟ್ಸ್ ಪುಸ್ತಕಗಳನ್ನು 40 ದಿನಗಳಲ್ಲಿ ಓದಲು ಪ್ರೇರೇಪಿಸುತ್ತದೆ. ಭಾಗವಹಿಸುವವರು ಯೇಸುವನ್ನು ಎದುರಿಸಲು ಮತ್ತು ಲ್ಯೂಕ್ ಅವರ ಅದ್ಭುತ ಸಾಹಿತ್ಯ ವಿನ್ಯಾಸ ಹಾಗೂ ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳಲು ಈ ಯೋಜನೆ ಅನಿಮೇಟೆಡ್ ವಿಡಿಯೋ ಮತ್ತು ಒಳನೋಟವುಳ್ಳ ಸಾರಾಂಶವನ್ನು ಒಳಗೊಂಡಿದೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು BibleProject ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://bibleproject.com









