49 ವಾರಗಳ ಸವಾಲುಮಾದರಿ

The 49-Week Challenge

DAY 1 OF 341

ಇಡೀ ಬೈಬಲ್ ಅನ್ನು ಒಳಗೊಂಡಿರುವ ಈ 49 ವಾರಗಳ ಸವಾಲಿಗೆ ಸುಸ್ವಾಗತ! ಕೊನೆಯವರೆಗೂ ಮುಂದುವರಿಯಲು ಉತ್ತಮ ಮಾರ್ಗವೆಂದರೆ ಒಂದೇ ಸಮಯದಲ್ಲಿ ಒಂದೇ ಯೋಜನೆಯನ್ನು ಮಾಡಲು ಬಯಸುವ ಒಬ್ಬ ಅಥವಾ ಇಬ್ಬರು ಸ್ನೇಹಿತರನ್ನು ಹುಡುಕುವುದು. ಈ ಪ್ರಯಾಣದಲ್ಲಿ ನಿಮ್ಮೊಂದಿಗೆ ಸೇರಲು ನೀವು ಯಾರನ್ನು ಆಹ್ವಾನಿಸಬಹುದು? YouVersion ಬೈಬಲ್ ಅಪ್ಲಿಕೇಶನ್‌ನಲ್ಲಿ ಸ್ನೇಹಿತರೊಂದಿಗೆ ಯೋಜನೆಗಳು ಬಳಸಿಕೊಂಡು ನೀವು ಒಟ್ಟಿಗೆ ಓದಬಹುದು, ಅಥವಾ ನೀವು ಪ್ರತ್ಯೇಕವಾಗಿ ಓದಬಹುದು ಮತ್ತು ವಾರಕ್ಕೊಮ್ಮೆ ಪರಸ್ಪರ ಮಾತನಾಡಬಹುದು.

ಇಂದು ನೀವು ಓದಲು ಸಿದ್ಧರಾಗುತ್ತಿದ್ದಂತೆ, ದೇವರು ನಿಮಗೆ ಏನನ್ನಾದರೂ ಬಹಿರಂಗಪಡಿಸುವಂತೆ ಕೇಳಿಕೊಳ್ಳಿ. ನಂಬಲು ನೀಡಲಾಗುವ ಯಾವುದೇ ವಾಗ್ದಾನಗಳು, ಪಾಲಿಸಲು ಆಜ್ಞೆಗಳು, ಅಪ್ಪಿಕೊಳ್ಳಲು ನೀಡಲಾಗುವ ಸತ್ಯಗಳು, ಪಾಲಿಸಲು ನೀಡಲಾಗುವ ಎಚ್ಚರಿಕೆಗಳು ಅಥವಾ ವಿಶ್ರಾಂತಿ ಪಡೆಯಲು ನೀಡಲಾಗುವ ಯಾವುದೇ ಪ್ರೋತ್ಸಾಹವನ್ನು ಗಮನಿಸಿ. ಬೈಬಲ್ ಅಪ್ಲಿಕೇಶನ್‌ನಲ್ಲಿರುವವುಗಳ ಬಗ್ಗೆ ನೀವು ಟಿಪ್ಪಣಿಗಳನ್ನು ಮಾಡಬಹುದು, ಅಥವಾ ನಿಮ್ಮ ಆಲೋಚನೆಗಳನ್ನು ದಾಖಲಿಸಲು ದಿನಚರಿ ಹೊಂದುವುದನ್ನು ನೀವು ಪರಿಗಣಿಸಬಹುದು. ಇಂದಿನ ಶಾಸ್ತ್ರಗಳನ್ನು ಓದಿದ ನಂತರ, ವಿರಾಮ ತೆಗೆದುಕೊಂಡು ಯೋಚಿಸಲು ಎರಡು ಪ್ರಶ್ನೆಗಳು ಇಲ್ಲಿವೆ:

ದೇವರ ಬಗ್ಗೆ, ನಿಮ್ಮ ಬಗ್ಗೆ ಅಥವಾ ಪ್ರಪಂಚದ ಬಗ್ಗೆ ನೀವು ಏನು ಕಲಿಯುತ್ತೀರಿ?

ಇಂದು ನಿಮಗೆ ಎದ್ದು ಕಾಣುವ ಒಂದು ವಚನ ಅಥವಾ ಆಲೋಚನೆ ಇದೆಯೇ? ಅದರ ಬಗ್ಗೆ ದೇವರೊಂದಿಗೆ ಮಾತನಾಡಿ.

About this Plan

The 49-Week Challenge

ದೇವರೊಂದಿಗಿನ ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೀವು ಸಿದ್ಧರಿದ್ದೀರಾ? 49 ವಾರಗಳ ಸವಾಲನ್ನು ತೆಗೆದುಕೊಳ್ಳಿ! ಈ ಬೈಬಲ್ ಯೋಜನೆಯು ಪ್ರತಿದಿನ ಹಳೆಯ ಮತ್ತು ಹೊಸ ಒಡಂಬಡಿಕೆಯ ಓದುವಿಕೆಗಳೊಂದಿಗೆ ಸಂಪೂರ್ಣ ಬೈಬಲ್‌ನ ಮೂಲಕ ಹಾದುಹೋಗುತ್ತದೆ. ಬೈಬಲ್ ಅನ್ನು ಯೇಸುವನ್ನು ಸೂಚಿಸುವ ಒಂದು ಕಥೆಯಾಗಿ ತೋರಿಸಲು ಹಳೆಯ ಒಡಂಬಡಿಕೆಯ ಸಂಬಂಧಿತ ಅಧ್ಯಾಯಗಳ ಜೊತೆಗೆ ನೀವು ಹೊಸ ಒಡಂಬಡಿಕೆಯನ್ನು ಕಾಲಾನುಕ್ರಮದಲ್ಲಿ ಅನುಸರಿಸುತ್ತೀರಿ. ಪ್ರತಿ ಏಳನೇ ದಿನವು ನೀವು ಕಲಿಯುತ್ತಿರುವುದನ್ನು ಪ್ರತಿಬಿಂಬಿಸಲು ಮತ್ತು ಹಂಚಿಕೊಳ್ಳಲು ವಿರಾಮವಾಗಿದೆ.

More

ಈ ಯೋಜನೆಯನ್ನು ಒದಗಿಸಿದಕ್ಕೆ ನಾವು Life.Church ಗೆ ಕೃತಜ್ಞತೆಗಳನ್ನು ಅರ್ಪಿಸಲು ಇಷ್ಟ ಪಡುತ್ತೇವೆ. ಹೆಚ್ಚಿನ ಮಾಹಿತಿಗಳಿಗಾಗಿ, ದಯವಿಟ್ಟು ಭೇಟಿ ನೀಡಿ: www.life.church