ನಿನಗಾಗಿ ಇಲ್ಲಿಯೇ ಕಾಯುತ್ತಿರುವೆ, ಉಗಮದ ಕಾಲದ ನಿರೀಕ್ಷೆಯ ಪ್ರಯಾಣಮಾದರಿ

Waiting Here for You, An Advent Journey of Hope

DAY 3 OF 7

ನಾನು ಯಾರಿಗೆ ಭಯಪಟ್ಟೇನು?

ಆಲೋಚನೆ

ಜಗಳ ಮತ್ತು ರೋಷದ ನಡುವೆ, ನಿಮ್ಮ ದೃಷ್ಟಿಯು ಯೇಸುವಿನ ಮೇಲಿರಲಿ. ನಿಮಗಾಗಿ ಆತನು ಹೋರಾಡುತ್ತಿದ್ದಾನೆ. ಇಮ್ಮಾನುವೇಲನು ಹತ್ತಿರದಲ್ಲಿದ್ದಾನೆ. ನಿಮ್ಮ ಮೇಲೆ ಆಪಾದನೆಗಳಿದ್ದರೂ ಹಾಗೂ ಶತ್ರುವು ನಿಮ್ಮ ಆಲೋಚನೆಗಳಿಗೆ ದಾಳಿ ಮಾಡಿದರೂ, ನಿಮ್ಮನ್ನು ಜನರು ಕತ್ತರಿಸಲು ಯತ್ನಿಸಿದರೂ ಮತ್ತು ನಿಮ್ಮ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದರೂ, ಉಪಾಯಗಳು ಹೆಣೆಯಲಾಗಿದ್ದರೂ ಮತ್ತು ಶೋಧನೆಗಳು ಘರ್ಜಿಸಿದರೂ, ನಿಮ್ಮ ಶರೀರವು ಸೋತು ಸೇಡಿಗಾಗಿ ಚೀರಿದರೂ—ನಿಮ್ಮ ಭರವಸೆಯು ನಿಮಗಾಗಿ ಹೋರಾಡುವವನ ಮೇಲಿದೆ. ನೀವು ದೇವರ ಪ್ರೀತಿಯಲ್ಲಿ ಮತ್ತು ಆತನ ಬಲವುಳ್ಳ ನಾಮದ ಶಕ್ತಿಯಲ್ಲಿ ಸುರಕ್ಷಿತವಾಗಿದ್ದೀರಿ.

ಧ್ಯಾನ

ಬಿರುಗಾಳಿಯ ನಡುವೆ ನನ್ನಲ್ಲಿ ನಂಬಿಕೆಯಿಡಲು ಅಂಜಬೇಡ

ಬಿರುಗಾಳಿಯ ನಡುವೆ ನನ್ನಲ್ಲಿ ನಂಬಿಕೆಯಿಡಲು ಅಂಜಬೇಡ,
ನಾನೆಂದಿಗೂ ಬಹಳ ಹತ್ತಿರದಲ್ಲಿರುವೆ.
ನಿನ್ನ ಅನಗತ್ಯ ಆತಂಕಗಳನ್ನು,
ನಂತರದಲ್ಲಿ, ಶ್ರಮ ಪಡುತ್ತಿರುವವರನ್ನು ಶಾಂತಗೊಳಿಸುತ್ತೇನೆ, ಅಂಜಬೇಡ.

ಹಿಮ್ಮೆಟ್ಟು

ಭಯಪಡಬೇಡ, ನಾನು ನಿನ್ನ ಸಂಗಡ ಇದ್ದೇನೆ,
ಭಯಪಡಬೇಡ, ನಾನು ನಿನ್ನ ಸಂಗಡ ಇದ್ದೇನೆ,
ಭಯಪಡಬೇಡ, ನಾನು ನಿನ್ನ ಸಂಗಡ ಇದ್ದೇನೆ,
ನಿನ್ನ ದಾರಿಯುದ್ದಕ್ಕೂ ನಿನ್ನ ಸಂಗಡ ಇದ್ದೇನೆ.

ನಾನು ನಿನ್ನ ಬಳಿಯಲ್ಲಿ ನೀನು ಎಣಿಸಿದಷ್ಟು,
ಹತ್ತಿರದಲ್ಲಿ ಇರಲಾಗದಿರಬಹುದು;
ಆದರೆ ನೆಮ್ಮದಿಯಲ್ಲಿ ಮತ್ತು ಬಿರುಗಾಳಿಯಲ್ಲಿ,
ನಿನ್ನ ಎಲ್ಲಾ ಕೇಡುಗಳನ್ನು ನೋಡುವವನಾಗಿದ್ದೇನೆ.

ಹಿಮ್ಮೆಟ್ಟು

ರಕ್ಷಣೆಯನ್ನು ಲೋಕಕ್ಕೆ ತಂದ ನನ್ನ ಬಲವುಳ್ಳ ಹಸ್ತದಲ್ಲಿ;
ನಿನ್ನ ಭರವಸೆಯನ್ನು ಇಡಲು ಅಂಜಬೇಡ.
ನಿನಗೆ ಜೀವವನ್ನು ನೀಡಲು,
ಕಿರೀಟವನ್ನು ನೀಡಲು ನಾನು ಅತ್ಯಂತ ಸಂಕಟ ಪಟ್ಟಿದ್ದೇನೆ.

ಹಿಮ್ಮೆಟ್ಟು

ಜೆ.ಡಬ್ಲ್ಯು.ಹೋವೇ, 1–3 ಚರಣಗಳು

ಪ್ರಾರ್ಥನೆ

ತಂದೆಯೇ, ಬಿರುಗಾಳಿಯ ಮಧ್ಯದಲ್ಲಿ ನನ್ನ ಭರವಸೆಯನ್ನು ನಿನ್ನ ಮೇಲೆ ಇರಿಸಿದ್ದೇನೆ. ನೀನು ನನಗಾಗಿ ಹೋರಾಡುವವನಾಗಿದ್ದೀಯ ಮತ್ತು ನನ್ನ ಶತ್ರುಗಳಿಗಿಂತಲೂ ಬಲವುಳ್ಳವನಾಗಿದ್ದೀಯ. ಇಂದು ನಾನು ಎದುರಿಸುವ ಯಾವುದೇ ಸಂಗತಿಯು ನಿನಗಿಂತ ಶಕ್ತಿಶಾಲಿಯಾಗಿಲ್ಲ. ನನ್ನ ಪಾದಕ್ಕೆ ನೀನೇ ಸದೃಢ ಬುನಾದಿ. ನನ್ನ ನೆರೆಯವರನ್ನು ನೀನು ರಕ್ಷಿಸಿದ್ದಕ್ಕೆ ನಿನಗೆ ಧನ್ಯವಾದಗಳು. ನನ್ನ ಶತ್ರುಗಳ ಮಧ್ಯದಲ್ಲಿಯೇ ನನಗೆ ನಿನ್ನ ಶಾಂತಿಯನ್ನು ದಯಪಾಲಿಸು, ನಿನ್ನ ಪ್ರೀತಿಯಲ್ಲಿ ನೀನು ನನ್ನನ್ನು ಕಾಣುವಿ ಮತ್ತು ಸಂರಕ್ಷಿಸುವಿ ಎಂದು ನನಗೆ ತಿಳಿದಿದೆ. ಆಮೆನ್.

ದೇವರ ವಾಕ್ಯ

ದಿನ 2ದಿನ 4

About this Plan

Waiting Here for You, An Advent Journey of Hope

ಕ್ರಿಸ್ಮಸ್ ಉಗಮದ ಕಾಲವು ನಿರೀಕ್ಷಣೆಯಿಂದ ಕಾಯುವ ಮತ್ತು ಸಿದ್ಧತೆ ಮಾಡಿಕೊಳ್ಳುವ ಕಾಲ. ನೀವು ಕರ್ತನಲ್ಲಿ ನಿರೀಕ್ಷೆಯುಳ್ಳವರಾಗಿದ್ದರೆ ನಿಮ್ಮ ನಿರೀಕ್ಷಣೆಯ ಕಾಲವು ವ್ಯರ್ಥವಾದ ಕಾಲವಲ್ಲ ಎಂದು ಅನ್ವೇಷಿಸುವ ಉಗಮದ ಕಾಲದ ಪ್ರಯಾಣದಲ್ಲಿ ಸಭಾಪಾಲಕರು ಮತ್ತು ಲೇಖಕರು ಆಗಿರುವ ಲೂಯೀ ಗಿಗ್ಲಿಯೋ ಅವರ ಜೊತೆ ಸೇರಿಕೊಳ್ಳಿ. ಉಗಮದ ಕಾಲದ ಪ್ರಯಾಣದ ಮೂಲಕ ಕೊಡುಗೆಯಾಗಿ ಬರುವ ಅಪಾರವಾದ ನಿರೀಕ್ಷೆಯನ್ನು ಪಡೆದುಕೊಳ್ಳುವ ಅವಕಾಶವನ್ನು ಹಿಡಿದಿಟ್ಟುಕೊಳ್ಳಿ. ಇನ್ನೂ ಮುಂದಿನ ಏಳು ದಿನಗಳಲ್ಲಿ ನಿರೀಕ್ಷೆಯು ಸ್ತೋತ್ರಕ್ಕೆ ದಾರಿಯಾದಾಗ ನಿಮ್ಮ ಆತ್ಮಕ್ಕೆ ಶಾಂತಿ ಮತ್ತು ಪ್ರೋತ್ಸಾಹವನ್ನು ನೀವು ಕಂಡುಕೊಳ್ಳುವಿರಿ!

More

ನಿನಗಾಗಿ ಇಲ್ಲಿಯೇ ಕಾಯುತ್ತಿದ್ದೇನೆ (ಪ್ಯಾಷನ್ ಪ್ರಕಾಶನ) ಎಂಬ ಪುಸ್ತಕದ ಲೇಖಕರಾಗಿರುವ, ಲೂಯೀ ಗಿಗ್ಲಿಯೋ ಅವರಿಗೆ, ಈ ಯೋಜನೆಯನ್ನು ನೀಡಿದ್ದಕ್ಕೆ ನಾವು ಧನ್ಯವಾದವನ್ನು ಹೇಳಲು ಇಷ್ಟಪಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ: www.passionresources.com