Logo de YouVersion
Ícono Búsqueda

ಆದ್ಯತ್‌ರ ಪುಸ್ತಕ 2

2
1ಇನ್ನನೆ ಬಾನವು ಬೂಮಿಯು, ಅದ್‌ಲ್‌ ಉಳ್ಳದೆಲ್ಲವು ಸೃಷ್ಟಿ ಆಚಿ. 2ದೇವ ತಾಂಡ ಸೃಷ್ಟಿನೆಲ್ಲಾ ಏಳನೇ ದಿವಸತ್‌ಲ್‌ ಪೂರ್ತಿ ಮಾಡಿತ್, ಏಳನೆ ದಿವಸತ್‌ಲ್‌ ಎಲ್ಲಾ ಕೆಲಸತ್‌ಂಜ ಆರಾಮ್‌ ಮಾಡ್‌ಚಿ. 3ಲದೇವ ತಾನ್‌ ಸೃಷ್ಟಿ ಮಾಡಿತ್‌ ಉಂಟ್ ಮಾಡ್‌ನ ಎಲ್ಲಾ ಕೆಲಸತ್‌ಂಜ ಆರಾಮ್‌ ಮಾಡ್‌ನಾಂಗ್, ಏಳನೆ ದಿವಸತ್‌ನ ದೇವ ಪವಿತ್‌ರವಾನದಾಯಿತ್‌ ಆಶೀರ್ವಾದ ಮಾಡ್‌ಚಿ. 4ಯೆಹೋವನಾನ ದೇವ ಬಾನ್‌ತ್‌ನ ಪಿಂಞ ಬೂಮಿನ ಸೃಷ್ಟಿ ಮಾಡ್‌ನ ಚರಿತ್‌ರೆ ಇನ್ನನೆ ಆಯಿತಿಂಜತ್. ಯೆಹೋವನಾನ ದೇವ ಬೂಮಿ ಪಿಂಞ ಬಾನತ್‌ನೆಲ್ಲ ಸೃಷ್ಟಿ ಮಾಡುವಕ ಇನ್ನನೆ ಇಂಜತ್,
ತೋಟತ್‌ಲ್‌ ಆದಾಮ ಪಿಂಞ ಹವ್ವ
5ಬೂಮಿರ ಮೇಲೆ ಒರ್‌ ಗಿಡವೂ ಬಂದಿತ್‌ಲ್ಲೆ ಪಿಂಞ ಏದ್‌ ಪಿಲ್ಲ್‌ ಪೊದರ್‌ ಮೊಳೆಕೆ ಬುಟ್ಟಿತ್‌ಲ್ಲೆ. ಎನ್ನಂಗೆಣ್ಣ್‌ಚೇಂಗಿ ಯೆಹೋವನಾನ ದೇವ ಬೂಮಿರ ಮೇಲೆ ಮಳೆನ ಅಯಿಚಿತ್‌ಂಜಿತ್‌ಲ್ಲೆ. ನೆಲತ್‌ಲ್‌ ತೋಟ್ಟ ಪಣಿ ಮಾಡ್‌ವಕ್‌ ಏದ್‌ ಮನುಷ್ಯನು ಇಂಜಿತ್‌ಲ್ಲೆ. 6ಮಳೆಕ್‌ ಬದ್‌ಲಾಯಿತ್‌ ಬೂಮಿಯಿಂಜ ಮಂಜ್ ಪಬ್ಬಿತ್‌ ನೆಲತ್‌ನೆಲ್ಲ ನೆನೆಚಿಡ್‌ವಕಿಂಜತ್. 7ಅಲ್ಲಿಂಜ ಯೆಹೋವನಾನ ದೇವ ನೆಲತ್‌ರ ಮಣ್ಣ್‌ಂಜ ಮನುಷ್ಯನ ರೂಪ್‌ಚಿಟ್ಟಿತ್‌ ಅಂವೊಂಡ ಮೂಕ್‌ಲ್ ತಾಂಡ ಜೀವ ಶ್ವಾಸತ್‌ನ ಊದ್ವಕ, ಆ #2.7 ಮನುಷ್ಯ ಎನ್ನ್‌ಚೇಂಗಿ ಮೂಲ ತಕ್ಕ್‌ಲ್‌ ಆದಾಮಂದ್‌ ಕಾಕುವಮನುಷ್ಯ ಒರ್‌ ಜೀವವುಳ್ಳ ಮನುಷ್ಯನಾಚಿ. 8ಪಿಂಞ ಯೆಹೋವನಾನ ದೇವ ಕ್‍ೕಕ್‌ ದಿಕ್ಕಲ್‌ ಏದೆನ್‌ ಎಣ್ಣುವ ಒರ್‌ ತೋಟತ್‌ನ ಉಂಟ್‌ಮಾಡಿತ್, ತಾನ್‌ ಸೃಷ್ಟಿ ಮಾಡ್‌ನ ಮನುಷ್ಯನ ಅಲ್ಲಿ ಬುಟ್ಟತ್. 9ಅಲ್ಲಿ ಯೆಹೋವನಾನ ದೇವ ಎಲ್ಲಾ ತರತ್‌ರ ಮರಗಿಡಗಳನ ಉಂಟ್ ಮಾಡ್‌ಚಿ. ನೋಟ್‌ವಕ್‌ ಚಾಯಿ ಉಳ್ಳದ್‌ನ ಪಿಂಞ ತಿಂಬಕ್‌ ರಸ ಉಳ್ಳ ಎಲ್ಲಾ ತರತ್‌ರ ಮರತ್‌ನ ಬೂಮಿಯಿಂಜ ಮೊಳೆಕೆ ಬಪ್ಪನೆಕೆ ಮಾಡ್‌ಚಿ. ಆ ತೋಟತ್‌ರ ಮದ್ಯತ್‌ಲ್‌ ಜೀವ ತಪ್ಪ ಮರ ಪಿಂಞ ನಲ್ಲದ್‌ ಕೆಟ್ಟದ್‌ ಏದ್‌ಂದ್‌ ಅರಿವ್‌ ತಪ್ಪ ಮರತ್‌ನ ಮೊಳೆಕೆ ಬಪ್ಪನೆಕೆ ಮಾಡ್‌ಚಿ. 10ಏದೆನ್‌ ತೋಟತ್‌ಂಜ ಒರ್‌ ಪೊಳೆ ತೋಟಕೆಲ್ಲಾ ನೀರ್‌ ಪರಿಂಜತ್, ಅಲ್ಲಿಂಜ ನಾಲ್‌ ಬಾಗವಾಯಿತ್‌ ಪೊಳೆ ಪರಿಂಜಿತ್‌ ಪೋಚಿ. 11ಆದ್ಯ ಪೊಳೆರ ಪೆದ ಪೀಶೋನ್; ಅದ್‌ ಪೊನ್ನ್‌ ಉಳ್ಳ ಹವೀಲ ದೇಶತ್‌ರ ಸುತ್ತ್‌ಲ್‌ ಪರಿಯುವ. 12ಆ ದೇಶತ್‌ರ ಪೊನ್ನ್‌ ನಲ್ಲದ್. ಅಲ್ಲಿ ಬದೋಲಕ ಎಣ್ಣುವ ಸುಗಂದ ತೈಲವು, ಗೋಮೇದಿಕ ಎಣ್ಣುವ ಬೆಲೆಯುಳ್ಳ ರತ್‌ನವು ಇಂಜತ್. 13ದಂಡನೆ ಪೊಳೆರ ಪೆದ ಗೀಹೋನ್; ಅದ್‌ ಕೂಷ್ ದೇಶತ್‌ರ ಸುತ್ತ್‌ಲ್‌ ಪರಿಯುವ. 14ಮೂಂದನೆ ಪೊಳೆರ ಪೆದ ಹಿದ್ದೆಕೆಲ್; ಅದ್‌ ಅಶ್ಯೂರ್‌ ದೇಶತ್‌ರ ಕ್‍ೕಕ್‌ ದಿಕ್ಕ್‌ಲ್‌ ಪರಿಯುವ. ನಾಲನೆ ಪೊಳೆರ ಪೆದ ಯುಫ್ರೇಟೀಸ್.
15ಯೆಹೋವನಾನ ದೇವ ತಾನ್‌ ಸೃಷ್ಟಿ ಮಾಡ್‌ನ ಮನುಷ್ಯನ ಕಾಕಿಯಂಡ್‌ ಪೋಯಿತ್, ಏದೆನ್‌ ತೋಟತ್‌ಲ್‌ ತೋಟ್ಟ ಪಣಿ ಮಾಡ್‌ವಕು ಅದ್‌ನ ಚಾಯಿ ನೋಟ್ಟುವಕು ಅಲ್ಲಿ ಬೆಚ್ಚತ್. 16ಪಿಂಞ ಯೆಹೋವನಾನ ದೇವ ಆ ಮನುಷ್ಯಂಗ್: ನೀನ್‌ ತೋಟತ್‌ಲ್‌ ಉಳ್ಳ ಎಲ್ಲಾ ಮರತ್‌ರ ಪಣ್ಣ್‌ನ ಏದ್‌ ಅನುಮತಿಯು ಇಲ್ಲತೆ (ಬೋಂಡಿಯೆಚ್ಚಕ್‌) ತಿಂಗಲು; 17ಆಚೇಂಗಿ ನಲ್ಲದ್‌ ಪಿಂಞ ಕೆಟ್ಟದ್‌ ಏದ್‌ಂದ್‌ ಅರಿವ್‌ ತಪ್ಪ ಮರತ್‌ರ ಪಣ್ಣ್‌ನ ಮಾತ್‌ರ ನೀನ್‌ ತಿಂಬಕ್ಕಾಗ. ಆ ಪಣ್ಣ್‌ನ ತಿಂದ ಅದೇ ಗಳಿಗೇಲ್‌ ನೀನ್‌ ಚತ್ತ್‌ ಪೋಪಿಯಾಂದ್‌ ಎಚ್ಚರಿಕೆ ಮಾಡ್‌ಚಿ. 18ಅಲ್ಲಿಂಜ ಯೆಹೋವನಾನ ದೇವ: ಮನುಷ್ಯ ಒಂಟಿಯಾಯಿತ್‌ ಇಪ್ಪದ್‌ ನಲ್ಲದಿಲ್ಲೆ. ಅಂವೊಂಗ್‌ ಸರಿಯಾನ ಜೊತೆಗಾರ್ತಿನ ಮಾಡ್‌ವೀಂದ್‌ ಎಣ್ಣ್‌ಚಿ. 19ಪಿಂಞ ಯೆಹೋವನಾನ ದೇವ ಎಲ್ಲಾ ತರತ್‌ರ ಪ್ರಾಣಿಯಳ ಪಿಂಞ ಬಾನತ್‌ಲ್‌ ಪಾರುವ ಪಕ್ಷಿಯಳ ಮಣ್ಣಿಂಜ ಸೃಷ್ಟಿ ಮಾಡಿತ್, ಈ ಆದಾಮ ಇದಂಗೆಲ್ಲಾ ಎಂತ ಪೆದ ಬೆಪ್ಪಾಂದ್‌ ನೋಟ್‌ವಕ್‌ ಎಲ್ಲಾನ ಅಂವೊಂಡ ಪಕ್ಕ ಬಪ್ಪಕ್‌ ಮಾಡ್‌ಚಿ. ಅದಂಗೆಲ್ಲಾ ಆದಾಮ ಎಂತ ಪೆದ ಬೆಚ್ಚತೊ, ಅದೇ ಅದ್‌ಂಡ ಪೆದ ಆಚಿ. 20ಇನ್ನನೆ ಆ ಆದಾಮ ಎಲ್ಲಾ ಚಾಕ್‌ ಪ್ರಾಣಿಯಕು, ಬಾನತ್‌ಲ್‌ ಪಾರುವ ಪಕ್ಷಿಯಂಗಕು, ಕಾಡ್‌ಪ್ರಾಣಿಯಕು ಪೆದ ಬೆಚ್ಚತ್. ಆಚೇಂಗಿಯು ಆದಾಮಂಗ್‌ ಸರಿಯಾನ ಜೊತೆಗಾರ್ತಿ ಕ್‌ಟ್ಟಿತ್‌ಲ್ಲೆ.
21ಅಕ್ಕ ಯೆಹೋವನಾನ ದೇವ ಆದಾಮಂಗ್‌ ದುಂಬ ವರ್‌ಕ್‌ ಬಪ್ಪ್‌ಚಿಟ್ಟತ್. ಅನ್ನನೆ ಅಂವೊ ವರಿಯಂಡಿಪ್ಪಕ, ಯೆಹೋವನಾನ ದೇವ ಆ ಮನುಷ್ಯಂಡ ಬಕ್ಕರೆರ ಒರ್‌ ಮೂಳೆನ ಎಡ್‌ತಿತ್, ಅದ್‌ಂಡ ಜಾಗತ್‌ನ ಯರ್ಚಿಯಿಂಜ ಮುಚ್ಚಿರ್‌ತ್. 22ಅಲ್ಲಿಂಜ ಯೆಹೋವನಾನ ದೇವ ಮನುಷ್ಯಡಿಂಜ ಎಡ್‌ತ ಮೂಳೆಯಿಂಜ ಒರ್‌ ಪೊಣ್ಣಾಳ್‌ನ ಮಾಡಿತ್‌ ಅವಳ ಆ ಆದಾಮಂಡ ಪಕ್ಕ ಕಾಕಿಯಂಡ್‌ ಬಾತ್. 23ಅಕ್ಕಣೆಕ್ ಆದಾಮ: ಇಕ್ಕ ಸರಿ, ಇವ ನಾಡ ಮೂಳೆಯಿಂಜ ಬಂದ ಮೂಳೆ, ನಾಡ ಯರ್ಚಿಯಿಂಜ ಬಂದ ಯರ್ಚಿಯೀಂದ್‌ ಎಣ್ಣ್‌ಚಿ. ಇವಳ ಆಣಾಳ್‌ಂಜ ಮಾಡ್‌ನಗೊಂಡ್‌ ಪೊಣ್ಣಾಳ್‌ಂದ್‌ ಕಾಕ್‌ವಾಂದ್‌ ಎಣ್ಣ್‌ಚಿ.
24ಈ ಕಾರಣತ್‌ಂಜ ಒರ್‌ ಮನುಷ್ಯ ತಾಂಡ ಅಪ್ಪನ ಅವ್ವನ ಬುಟ್ಟಿತ್, ತಾಂಡ ಪೊಣ್ಣ್‌ರ ಕೂಡೆ ಕೂಡಿತ್, ಅಯಿಂಗ ದಂಡಾಳು ಒರೇ ತಡಿಯಾಯಿತ್ತಿಪ್ಪ. 25ಆದಾಮ ಪಿಂಞ ಅಂವೊಂಡ ಪೊಣ್ಣ್‌ ದಂಡಾಳು ಬೆತ್ತಲೆಯಾಯಿತ್‌ಂಜತ್, ಆಚೇಂಗಿ ಅಯಿಂಗಕ್‌ ಞಾಣ ಇಂಜಿತ್‌ಲೆ.

Destacar

Compartir

Copiar

None

¿Quieres guardar tus resaltados en todos tus dispositivos? Regístrate o Inicia sesión