1
ಆದಿಕಾಂಡ 1:26-27
ಕನ್ನಡ ಸತ್ಯವೇದವು J.V. (BSI)
ಆಮೇಲೆ ದೇವರು - ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿವಿುಕೀಟಗಳ ಮೇಲೆಯೂ ಎಲ್ಲಾ ಭೂವಿುಯ ಮೇಲೆಯೂ ದೊರೆತನಮಾಡಲಿ ಅಂದನು. ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.
Compare
Explore ಆದಿಕಾಂಡ 1:26-27
2
ಆದಿಕಾಂಡ 1:28
ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ - ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂವಿುಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂವಿುಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ ಅಂದನು.
Explore ಆದಿಕಾಂಡ 1:28
3
ಆದಿಕಾಂಡ 1:1
ಆದಿಯಲ್ಲಿ ದೇವರು ಆಕಾಶವನ್ನೂ ಭೂವಿುಯನ್ನೂ ಉಂಟುಮಾಡಿದನು.
Explore ಆದಿಕಾಂಡ 1:1
4
ಆದಿಕಾಂಡ 1:2
ಭೂವಿುಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು; ಆದಿಸಾಗರದ ಮೇಲೆ ಕತ್ತಲಿತ್ತು; ದೇವರಾತ್ಮವು ಜಲಸಮೂಹಗಳ ಮೇಲೆ ಚಲಿಸುತ್ತಿತ್ತು.
Explore ಆದಿಕಾಂಡ 1:2
5
ಆದಿಕಾಂಡ 1:3
ಆಗ ದೇವರು - ಬೆಳಕಾಗಲಿ ಅನ್ನಲು ಬೆಳಕಾಯಿತು.
Explore ಆದಿಕಾಂಡ 1:3
6
ಆದಿಕಾಂಡ 1:31
ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು. ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು.
Explore ಆದಿಕಾಂಡ 1:31
7
ಆದಿಕಾಂಡ 1:4
ದೇವರು ಆ ಬೆಳಕನ್ನು ಒಳ್ಳೇದೆಂದು ನೋಡಿದನು. ದೇವರು ಬೆಳಕನ್ನೂ ಕತ್ತಲೆಯನ್ನೂ ಬೇರೆ ಬೇರೆ ಮಾಡಿ ಬೆಳಕಿಗೆ ಹಗಲೆಂದೂ ಕತ್ತಲೆಗೆ ಇರುಳೆಂದೂ ಹೆಸರಿಟ್ಟನು.
Explore ಆದಿಕಾಂಡ 1:4
8
ಆದಿಕಾಂಡ 1:29
ಮತ್ತು ದೇವರು - ಇಗೋ, ಸಮಸ್ತಭೂವಿುಯ ಮೇಲೆ ಬೀಜವುಳ್ಳ ಎಲ್ಲಾ ಪೈರುಗಳನ್ನೂ ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ ನಿಮಗೆ ಆಹಾರಕ್ಕಾಗಿ ಕೊಟ್ಟಿದ್ದೇನೆ.
Explore ಆದಿಕಾಂಡ 1:29
9
ಆದಿಕಾಂಡ 1:5
ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೊದಲನೆಯ ದಿನವಾಯಿತು.
Explore ಆದಿಕಾಂಡ 1:5
10
ಆದಿಕಾಂಡ 1:6
ಬಳಿಕ ದೇವರು - ಜಲಸಮೂಹಗಳ ನಡುವೆ ವಿಸ್ತಾರವಾದ ಗುಮಟವು ಉಂಟಾಗಲಿ; ಅದು ಕೆಳಗಣ ನೀರುಗಳನ್ನೂ ಮೇಲಣ ನೀರುಗಳನ್ನೂ ಬೇರೆ ಬೇರೆ ಮಾಡಲಿ ಅಂದನು.
Explore ಆದಿಕಾಂಡ 1:6
11
ಆದಿಕಾಂಡ 1:30
ಇದಲ್ಲದೆ ಭೂವಿುಯ ಮೇಲೆ ತಿರುಗಾಡುವ ಮೃಗಗಳು, ಆಕಾಶದಲ್ಲಿ ಹಾರಾಡುವ ಪಕ್ಷಿಗಳು, ನೆಲದಲ್ಲಿ ಹರಿದಾಡುವ ಕ್ರಿವಿುಕೀಟಗಳು ಎಂಬ ಜೀವಿಗಳಿಗೆ ಎಲ್ಲಾ ಹುಲ್ಲುಸೊಪ್ಪುಗಳನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಎಂದು ಹೇಳಿದನು; ಅದು ಹಾಗೆಯೇ ಆಯಿತು.
Explore ಆದಿಕಾಂಡ 1:30
12
ಆದಿಕಾಂಡ 1:14
ಬಳಿಕ ದೇವರು - ಆಕಾಶಮಂಡಲದಲ್ಲಿ ಬೆಳಕುಗಳು ಉಂಟಾಗಲಿ; ಅವು ಹಗಲಿರುಳುಗಳನ್ನು ಬೇರೆ ಬೇರೆ ಮಾಡಲಿ; ಇದಲ್ಲದೆ ಅವು ಗುರುತುಗಳಾಗಿದ್ದು ಸಮಯಗಳನ್ನೂ ದಿನಸಂವತ್ಸರಗಳನ್ನೂ ತೋರಿಸಲಿ
Explore ಆದಿಕಾಂಡ 1:14
13
ಆದಿಕಾಂಡ 1:11
ತರುವಾಯ ದೇವರು - ಭೂವಿುಯು ಹುಲ್ಲನ್ನೂ ಬೀಜಬಿಡುವ ಕಾಯಿಪಲ್ಯದ ಗಿಡಗಳನ್ನೂ ಬೆಳೆಸಲಿ; ಮತ್ತು ಬೀಜವುಳ್ಳ ಹಣ್ಣಿನ ಮರಗಳನ್ನೂ ಅವುಗಳ ಜಾತಿಗನುಸಾರವಾಗಿ ಹುಟ್ಟಿಸಲಿ ಎಂದು ಹೇಳಿದನು; ಹಾಗೆಯೇ ಆಯಿತು.
Explore ಆದಿಕಾಂಡ 1:11
14
ಆದಿಕಾಂಡ 1:7
ದೇವರು ವಿಸ್ತಾರವಾದ ಗುಮಟವನ್ನು ಮಾಡಿ ಅದರ ಕೆಳಗಿದ್ದ ನೀರುಗಳನ್ನು ಅದರ ಮೇಲಿದ್ದ ನೀರುಗಳಿಂದ ವಿಂಗಡಿಸಿದನು; ಹಾಗೆಯೇ ಆಯಿತು.
Explore ಆದಿಕಾಂಡ 1:7
15
ಆದಿಕಾಂಡ 1:12
ಭೂವಿುಯಲ್ಲಿ ಹುಲ್ಲು ಬೆಳೆಯಿತು; ತಮ್ಮತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು; ತಮ್ಮತಮ್ಮ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳು ಕಾಣಿಸಿದವು. ದೇವರು ಅದನ್ನು ಒಳ್ಳೇದೆಂದು ನೋಡಿದನು.
Explore ಆದಿಕಾಂಡ 1:12
16
ಆದಿಕಾಂಡ 1:16
ದೇವರು ಹಗಲನ್ನಾಳುವದಕ್ಕೆ ದೊಡ್ಡ ಬೆಳಕನ್ನೂ ಇರುಳನ್ನಾಳುವದಕ್ಕೆ ಚಿಕ್ಕ ಬೆಳಕನ್ನೂ, ಈ ಎರಡು ದೊಡ್ಡ ಬೆಳಕುಗಳನ್ನು ಉಂಟುಮಾಡಿದನು. ಆತನು ನಕ್ಷತ್ರಗಳನ್ನು ಸಹ ಉಂಟುಮಾಡಿದನು.
Explore ಆದಿಕಾಂಡ 1:16
17
ಆದಿಕಾಂಡ 1:9-10
ಅನಂತರ ದೇವರು - ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ, ಒಣನೆಲವು ಕಾಣಿಸಲಿ ಅಂದನು; ಹಾಗೆಯೇ ಆಯಿತು. ದೇವರು ಒಣನೆಲಕ್ಕೆ ಭೂವಿುಯೆಂದೂ ಜಲಸಮೂಹಕ್ಕೆ ಸಮುದ್ರವೆಂದೂ ಹೆಸರಿಟ್ಟನು. ಆತನು ಅದನ್ನು ಒಳ್ಳೇದೆಂದು ನೋಡಿದನು.
Explore ಆದಿಕಾಂಡ 1:9-10
18
ಆದಿಕಾಂಡ 1:22
ಇದಲ್ಲದೆ ದೇವರು ಅವುಗಳಿಗೆ - ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ; ಪಕ್ಷಿಗಳು ಭೂವಿುಯ ಮೇಲೆ ಹೆಚ್ಚಲಿ ಎಂದು ಹೇಳಿ ಆಶೀರ್ವದಿಸಿದನು.
Explore ಆದಿಕಾಂಡ 1:22
19
ಆದಿಕಾಂಡ 1:24
ಮತ್ತು ದೇವರು - ಭೂವಿುಯಿಂದ ಜೀವಜಂತುಗಳು ಉಂಟಾಗಲಿ; ಪಶುಕ್ರಿವಿುಗಳೂ ಕಾಡುಮೃಗಗಳೂ ತಮ್ಮ ತಮ್ಮ ಜಾತಿಗನುಸಾರವಾಗಿ ಹುಟ್ಟಲಿ ಅಂದನು; ಹಾಗೆಯೇ ಆಯಿತು.
Explore ಆದಿಕಾಂಡ 1:24
20
ಆದಿಕಾಂಡ 1:20
ತರುವಾಯ ದೇವರು - ಗುಂಪುಗುಂಪಾಗಿ ಚಲಿಸುವ ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ; ಪಕ್ಷಿಗಳು ಭೂವಿುಯ ಮೇಲೆ ಅಂತರಿಕ್ಷದೊಳಗೆ ಹಾರಾಡಲಿ ಎಂದು ಹೇಳಿದನು.
Explore ಆದಿಕಾಂಡ 1:20
21
ಆದಿಕಾಂಡ 1:25
ದೇವರು ಕಾಡುಮೃಗಗಳನ್ನೂ ಪಶುಗಳನ್ನೂ ನೆಲದ ಮೇಲೆ ಹರಿದಾಡುವ ಕ್ರಿವಿುಕೀಟಗಳನ್ನೂ ಅವುಗಳ ಜಾತಿಗನುಸಾರ ಉಂಟುಮಾಡಿದನು. ಆತನು ಅದನ್ನು ಒಳ್ಳೇದೆಂದು ನೋಡಿದನು.
Explore ಆದಿಕಾಂಡ 1:25
YouVersion ඔබේ අත්දැකීම පෞද්ගලීකරණය කිරීමට කුකීස් භාවිතා කරයි. අපගේ වෙබ් අඩවිය භාවිතා කිරීම මගින්, අපගේ රහස්යතා ප්රතිපත්තිහි විස්තර කර ඇති පරිදි අපගේ කුකීස් භාවිතයට ඔබ එකඟ වේ
Home
Bible
Plans
Videos