1
ಮತ್ತಾಯನ ಸುವಾರ್ತೆ 5:15-16
ಪರಿಶುದ್ದ ಬೈಬಲ್
KERV
ಜನರು ದೀಪವನ್ನು ಪಾತ್ರೆಯ ಕೆಳಗೆ ಮುಚ್ಚಿಡುವುದಿಲ್ಲ. ಜನರು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಮನೆಯಲ್ಲಿರುವವರಿಗೆಲ್ಲಾ ಬೆಳಕು ಪ್ರಕಾಶಿಸುವುದು. ಅದೇ ರೀತಿಯಲ್ಲಿ ನೀವು ಜನರಿಗೆ ಬೆಳಕಾಗಿರಬೇಕು. ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ.
Compare
ಮತ್ತಾಯನ ಸುವಾರ್ತೆ 5:15-16ਪੜਚੋਲ ਕਰੋ
2
ಮತ್ತಾಯನ ಸುವಾರ್ತೆ 5:14
“ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿದ ಪಟ್ಟಣ ಮರೆಯಾಗಿರಲಾರದು.
ಮತ್ತಾಯನ ಸುವಾರ್ತೆ 5:14ਪੜਚੋਲ ਕਰੋ
3
ಮತ್ತಾಯನ ಸುವಾರ್ತೆ 5:8
ಪರಿಶುದ್ಧ ಹೃದಯವುಳ್ಳವರು ಧನ್ಯರು. ಅವರು ದೇವರನ್ನು ನೋಡುವರು.
ಮತ್ತಾಯನ ಸುವಾರ್ತೆ 5:8ਪੜਚੋਲ ਕਰੋ
4
ಮತ್ತಾಯನ ಸುವಾರ್ತೆ 5:6
ನೀತಿಗಾಗಿ ತವಕಪಡುವವರು ಧನ್ಯರು. ದೇವರು ಅವರನ್ನು ಸಂತೃಪ್ತಿಪಡಿಸುವನು.
ಮತ್ತಾಯನ ಸುವಾರ್ತೆ 5:6ਪੜਚੋਲ ਕਰੋ
5
ಮತ್ತಾಯನ ಸುವಾರ್ತೆ 5:44
ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ನಿಮಗೆ ಕೆಟ್ಟದ್ದನ್ನು ಮಾಡುವ ಜನರಿಗಾಗಿ ಪ್ರಾರ್ಥಿಸಿರಿ.
ಮತ್ತಾಯನ ಸುವಾರ್ತೆ 5:44ਪੜਚੋਲ ਕਰੋ
6
ಮತ್ತಾಯನ ಸುವಾರ್ತೆ 5:3
“ಆತ್ಮಿಕತೆಯಲ್ಲಿ ಬಡವರಾಗಿರುವವರು ಧನ್ಯರು. ಪರಲೋಕರಾಜ್ಯ ಅವರದು.
ಮತ್ತಾಯನ ಸುವಾರ್ತೆ 5:3ਪੜਚੋਲ ਕਰੋ
7
ಮತ್ತಾಯನ ಸುವಾರ್ತೆ 5:9
ಸಮಾಧಾನಪಡಿಸುವವರು ಧನ್ಯರು. ಅವರು ‘ದೇವರ ಮಕ್ಕಳು’ ಎನಿಸಿಕೊಳ್ಳುವರು.
ಮತ್ತಾಯನ ಸುವಾರ್ತೆ 5:9ਪੜਚੋਲ ਕਰੋ
8
ಮತ್ತಾಯನ ಸುವಾರ್ತೆ 5:4
ಈಗ ದು:ಖದಿಂದಿರುವವರು ಧನ್ಯರು. ದೇವರು ಅವರನ್ನು ಸಂತೈಸುವನು.
ಮತ್ತಾಯನ ಸುವಾರ್ತೆ 5:4ਪੜਚੋਲ ਕਰੋ
9
ಮತ್ತಾಯನ ಸುವಾರ್ತೆ 5:10
ನೀತಿಯ ನಿಮಿತ್ತ ಹಿಂಸೆಪಡುವವರು ಧನ್ಯರು. ಪರಲೋಕರಾಜ್ಯ ಅವರದು.
ಮತ್ತಾಯನ ಸುವಾರ್ತೆ 5:10ਪੜਚੋਲ ਕਰੋ
10
ಮತ್ತಾಯನ ಸುವಾರ್ತೆ 5:7
ಕರುಣೆ ತೋರುವವರು ಧನ್ಯರು. ಅವರು ಕರುಣೆ ಹೊಂದುವರು.
ಮತ್ತಾಯನ ಸುವಾರ್ತೆ 5:7ਪੜਚੋਲ ਕਰੋ
11
ಮತ್ತಾಯನ ಸುವಾರ್ತೆ 5:11-12
“ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮ್ಮನ್ನು ಅಪಹಾಸ್ಯ ಮಾಡಿದರೆ, ಹಿಂಸೆಪಡಿಸಿದರೆ ಮತ್ತು ನಿಮ್ಮ ಮೇಲೆ ಕೆಟ್ಟಕೆಟ್ಟ ವಿಷಯಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರಾಗಿದ್ದೀರಿ. ಸಂತೋಷಪಡಿರಿ, ಆನಂದಿಸಿರಿ. ಪರಲೋಕದಲ್ಲಿ ನಿಮಗಾಗಿ ಕಾದಿರುವ ಹೆಚ್ಚಿನ ಪ್ರತಿಫಲವನ್ನು ನೀವು ಹೊಂದುವಿರಿ. ನಿಮಗಿಂತ ಮುಂಚೆ ಜೀವಿಸಿದ್ದ ಪ್ರವಾದಿಗಳಿಗೂ ಜನರು ಹೀಗೆಯೇ ಮಾಡಿದರು.
ಮತ್ತಾಯನ ಸುವಾರ್ತೆ 5:11-12ਪੜਚੋਲ ਕਰੋ
12
ಮತ್ತಾಯನ ಸುವಾರ್ತೆ 5:5
ದೀನರು ಧನ್ಯರು. ದೇವರು ವಾಗ್ದಾನ ಮಾಡಿದ ಭೂಮಿಯನ್ನು ಅವರು ಹೊಂದಿಕೊಳ್ಳುವರು.
ಮತ್ತಾಯನ ಸುವಾರ್ತೆ 5:5ਪੜਚੋਲ ਕਰੋ
13
ಮತ್ತಾಯನ ಸುವಾರ್ತೆ 5:13
“ನೀವು ಭೂಮಿಗೆ ಉಪ್ಪಾಗಿದ್ದೀರಿ. ಆದರೆ ಉಪ್ಪೇ ತನ್ನ ರುಚಿಯನ್ನು ಕಳೆದುಕೊಂಡರೆ ಅದನ್ನು ಮತ್ತೆ ಉಪ್ಪನ್ನಾಗಿ ಮಾಡಲು ಸಾಧ್ಯವಿಲ್ಲ; ಅಂಥ ಉಪ್ಪಿನಿಂದ ಪ್ರಯೋಜನವೇನೂ ಇಲ್ಲ. ಜನರು ಅದನ್ನು ಹೊರಗೆ ಬಿಸಾಡಿ ಅದರ ಮೇಲೆ ನಡೆದಾಡುವರು.
ಮತ್ತಾಯನ ಸುವಾರ್ತೆ 5:13ਪੜਚੋਲ ਕਰੋ
14
ಮತ್ತಾಯನ ಸುವಾರ್ತೆ 5:48
ಆದ್ದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರಬೇಕು.
ಮತ್ತಾಯನ ಸುವಾರ್ತೆ 5:48ਪੜਚੋਲ ਕਰੋ
15
ಮತ್ತಾಯನ ಸುವಾರ್ತೆ 5:37
ಹೌದಾದರೆ ‘ಹೌದು’ ಎನ್ನಿರಿ. ಇಲ್ಲವಾದರೆ ‘ಇಲ್ಲ’ ಎನ್ನಿರಿ. ನೀವು ಇದಕ್ಕಿಂತ ಹೆಚ್ಚಾಗಿ ಹೇಳುವಂಥದ್ದು ಸೈತಾನನಿಂದ ಪ್ರೇರಿತವಾದದ್ದು.
ಮತ್ತಾಯನ ಸುವಾರ್ತೆ 5:37ਪੜਚੋਲ ਕਰੋ
16
ಮತ್ತಾಯನ ಸುವಾರ್ತೆ 5:38-39
“‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು’ ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ. ಆದರೆ ನಾನು ನಿಮಗೆ ಹೇಳುವುದೇನೆಂದರೆ, ದುಷ್ಟನಿಗೆ ವಿರೋಧವಾಗಿ ನಿಂತುಕೊಳ್ಳಬೇಡಿ. ಯಾವನಾದರೂ ನಿಮ್ಮ ಬಲಗೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡಿರಿ.
ಮತ್ತಾಯನ ಸುವಾರ್ತೆ 5:38-39ਪੜਚੋਲ ਕਰੋ
17
ಮತ್ತಾಯನ ಸುವಾರ್ತೆ 5:29-30
ನಿನ್ನ ಬಲಗಣ್ಣು ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕಿತ್ತು ಬಿಸಾಡು. ನಿನ್ನ ಪೂರ್ಣಶರೀರವು ನರಕಕ್ಕೆ ಬೀಳುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು. ನಿನ್ನ ಬಲಗೈ ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕತ್ತರಿಸಿ ಬಿಸಾಡು. ನಿನ್ನ ಪೂರ್ಣ ಶರೀರವು ನರಕಕ್ಕೆ ಹೋಗುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು.
ಮತ್ತಾಯನ ಸುವಾರ್ತೆ 5:29-30ਪੜਚੋਲ ਕਰੋ
Home
ਬਾਈਬਲ
Plans
ਵੀਡੀਓ